ಮಾಜಿ ರಾಷ್ಟ್ರಪತಿ ಆರ್ ವೆಂಕಟರಾಮನ್ ಸೇವೆ ಸ್ಮರಿಸಿದ ಮಮತಾ

ಕೋಲ್ಕತಾ, ಜನವರಿ 27, ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಸ್ಮರಿಸಿದ್ದಾರೆ. “ಭಾರತದ ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಪುಣ್ಯ ಸ್ಮರಣೆಯ ಸಮಯದಲ್ಲಿ  ಅವರ ಸೇವೆ  ನೆನೆಪಿಕೊಳ್ಳುವುದು ಬಹಳ ಸೂಕ್ತ,    ಸಮಂಜಸವೂ ಆಗಿದೆ ಎಂದು ಸಾಮಾಜಿಕ ನೆಟ್ವರ್ಕಿಂಗ್ ಪುಟದಲ್ಲಿ ಮಮತಾ ಪೋಸ್ಟ್ ಮಾಡಿದ್ದಾರೆ.

ವೆಂಕಟರಮಣ ಅವರು ಜನವರಿ 27, 2009 ರಂದು ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ನಿಧನರಾದರು. ಅವರು ದೇಶದ  8 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.ಡಿಸೆಂಬರ್ 4, 1910 ರಂದು ಜನಿಸಿದ ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯ ಕಾರ್ಯಕರ್ತರಾಗಿದ್ದರು

ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರು ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿ ಹಣಕಾಸು ಸಚಿವ ಮತ್ತು  ರಕ್ಷಣಾ ಮಂತ್ರಿಯಾಗಿ ನಂತರ,    1984 ರಲ್ಲಿ, ವೆಂಕಟರಮಣ ಅವರು ಭಾರತದ ಏಳನೇ ಉಪರಾಷ್ಟ್ರಪತಿಯಾಗಿ, 1987,ರ ನಂತರ 8 ನೇ ರಾಷ್ಟ್ರಪತಿಯಾಗಿ ಸಲ್ಲಿಸಿದ ಸೇವೆಯನ್ನು ಮರೆಯಲಾಗದು ಎಂದೂ  ಮಮತಾ ಸ್ಮರಿಸಿಕೊಂಡಿದ್ದಾರೆ.ತಮಿಳುನಾಡಿನ  ದಿಗ್ಗಜ ರಾಜಕಾರಣಿಗಳಾದ  ಕೆ.ಕಾಮರಾಜ್ ಮತ್ತು ಎಂ.ಭಕ್ತವತ್ಸಲಂ ಅವರ ಸಂಪುಟದಲ್ಲೂ ಅವರು ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.