ಕೋಲ್ಕತಾ, ಆಗಸ್ಟ್ 16 ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ಪುಣ್ಯತಿಥಿ ಅಂಗವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಗೌರವ ನಮನ ಸಲ್ಲಿಸಿದ್ದಾರೆ.
ಅಟಲ್ ಅವರ ಮಾತುಗಳನ್ನು ಪುನರ್ ಸ್ಮರಿಸೋಣ ಎಂದು ಮಮತಾ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಮ್ಮ ಟ್ವೀಟರ್ ಖಾತೆಯಲ್ಲಿ, ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಜಿ ಅವರ ಮೊದಲ ಪುಣ್ಯತಿಥಿ ಅಂಗವಾಗಿ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
"ಬಂದೂಕಿನಿಂದ ಯಾವುದೇ ಸಮಸ್ಯೆಗಳನ್ನು ಪರಿಹಾರವಾಗುವುದಿಲ್ಲ. ಇನ್ಸಾನಿಯತ್, ಜಮೂರಿಯತ್ ಮತ್ತು ಕಾಶ್ಮೀರಿಯತ್ ಎಂಬ ಮೂರು ತತ್ವಗಳಿಂದ ಸಮಸ್ಯೆಗಳನ್ನು ಇತ್ಯರ್ಥಪಡಿಸಬಹುದು ಎಂಬ ವಾಜಪೇಯಿ ಅವರ ಮಾತನ್ನು ಈಗ ಪುನರ್ ಸ್ಮರಿಸಿಕೊಳ್ಳಬೇಕಾಗಿದೆ ಎಂದು ಮಮತಾ ಹೇಳಿದ್ದಾರೆ.