ಪೋಷಕಾಂಶಯುಕ್ತ ತರಕಾರಿ ಬಳಕೆಯಿಂದ ಅಪೌಷ್ಠಿಕತೆಯನ್ನು ಹೋಗಲಾಡಿಸಬಹುದು: ಸುರೇಶ

ಲೋಕದರ್ಶನ ವರದಿ

ಶಿರಹಟ್ಟಿ  29: ಪ್ರತಿಯೊಬ್ಬರ  ಮನೆಯಲ್ಲು ಪೋಷಕಾಂಶಯುಕ್ತ ತರಕಾರಿ ಕೈತೋಟಗಳನ್ನು ಮಾಡಿಕೊಂಡು  ಅಪೌಷ್ಠಿಕತೆಯನ್ನು  ಹೋಗಲಾಡಿಸಬೇಕೆಂದು ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಶಿರಹಟ್ಟಿ ಸುರೇಶ ವಿ.ಕುಂಬಾರ ಇವರು ಹೇಳಿದರು.

ಅವರು ಹೊಸ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಜರುಗಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೃಜನಶೀಲ ಕಾರ್ಯಕ್ರಮದಲ್ಲಿ ತರಕಾರಿ ಮತ್ತು ಹಣ್ಣಿನಗಿಡ ವಿತರಣೆ ಮಾಡಿ ಮಾತನಾಡುತ್ತಾ, ರಾಜ್ಯದಲ್ಲಿ 52 ಲಕ್ಷ ಜನ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆೆ. ಅವರೆಲ್ಲರೂ ಪೌಷ್ಠಿಕತೆಯಿಂದ ಇರಬೇಕಾದರೆ ಪ್ರತಿಯೊಬ್ಬರೂ ತಮ್ಮ ತಮ್ಮ  ಮನೆಯ ಹಿತ್ತಲಲ್ಲಿ ಕನಿಷ್ಠ 10 ಜಾತಿಯ ವಿವಿಧ ತರಕಾರಿ ಮತ್ತು ಹಣ್ಣಿನ ಬೆಳೆಗಳನ್ನು ಬೆಳೆಸಬೇಕು. ಮಹಿಳೆಯರು ಮತ್ತು ಮಕ್ಕಳು ಪೌಷ್ಠಿಕ ಆಹಾರಕ್ಕೆ ಮನೆಯಲ್ಲೇ ಬೆಳೆಸಿದ ಆಹಾರವನ್ನು ಉಪಯೋಗಿಸಬೇಕೆಂದು ತಿಳಿಸಿದರು.

ಸಂಸ್ಥೆಯ ಯೋಜನಾಧಿಕಾರಿ ಶಿವಣ್ಣ ಎಸ್. ಮಾತನಾಡಿ ಮಣ್ಣು ಜೀವಂತ ತಾಯಿ ಈ ತಾಯಿಯನ್ನು ಬೆಳೆಸಬೇಕಾಗಿದೆೆ, ಸಾವಯವ ಗೊಬ್ಬರವನ್ನು ಉಪಯೋಗಿಸಿಕೊಂಡು ಭೂಮಿಯ ಫಲವತ್ತತೆಯನ್ನು ಉಪಯೊಗಿಸಿಕೊಂಡಲ್ಲಿ ದೇಶವು ಸಮೃದ್ದಿಯಾಗುತ್ತದೆ ಮತ್ತು ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳೆಸುವುದರಿಂದ ಭೂಮಿ, ಗಾಳಿ, ನೀರು ನೈಸಗರ್ಿಕ ಸಂಪತ್ತನ್ನು ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಹೀಗೆ ಎಲ್ಲಾ ಜ್ಞಾನ ವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ 25 ಜ್ಞಾನವಿಕಾಸ ಕೇಂದ್ರಗಳಲ್ಲಿ ಇಂತಹದ್ದೆ ಆದ ಹಸಿರು ಕ್ರಾಂತಿ ಕಾರ್ಯಕ್ರಮಕ್ಕೆ ಎಲ್ಲರು ಕೈಜೋಡಿಸಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ಶಾರದಾ ಹರವಿ ವಹಿಸಿದ್ದರು. ಮೇಲ್ವಿಚಾರಕ ಗಜೇಂದ್ರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರಕಲಾ, ಸೇವಾ ಪ್ರತಿನಿಧಿ ಅನ್ನಪೂಣರ್ಾ ಮತ್ತು ಜ್ಞಾನ ವಿಕಾಸ ಕೇಂದ್ರದ ಸರ್ವಸದಸ್ಯರು ಭಾಗವಹಿಸಿದ್ದರು.