ಒತ್ತಡ ಜೀವನ ಶೈಲಿಯಿಂದ ಅಪೌಷ್ಠಿಕತೆ: ಡಾ.ಬಿರಾದಾರ

ಬಾಗಲಕೋಟೆ19: ಇಂದಿನ ಒತ್ತಡದ ಜೀವನ ಶೈಲಿಯಿಂದಾಗಿ ಮತ್ತು ಆಹಾರದ ವ್ಯತ್ಯಾಸದಿಂದ ಗಭರ್ಿಣಿ ತಾಯಿ ಹಾಗೂ ಮಗು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಹೇಳಿದರು.

ನವನಗರದ ಜಿಲ್ಲಾ ಆಸ್ಪತ್ರೆಯಲ್ಲಿರುವ ಪೌಷ್ಠಿಕಾಂಶದ ಪುನಚ್ಛೇತನ ಕೇಂದ್ರದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಮಹಿಳೆಯರು ಗಭರ್ಾವಸ್ಥೆಯಲ್ಲಿ ತಮ್ಮ ಮನೆಯಲ್ಲಿಯೇ ದೊರಕಬಹುದಾದ ಅತ್ಯುತ್ತಮ ಆಹಾರ ಪದಾರ್ಥಗಳನ್ನು ನಿಯಮಿತವಾಗಿ  ಬಳಸಿಕೊಳ್ಳುವದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದ್ದು, ಗಭರ್ಾವಸ್ಥೆಯಲ್ಲಿ ಕಂಡು ಬರುವ ರಕ್ತ ಹೀನತೆಗೆ ಕಬ್ಬಿಣಾಂಶವಿರುವ ಆಹಾರ ಪದಾರ್ಥ ಬಳಸಿಕೊಳ್ಳಬೇಕು ಎಂದರು.

ಗಭರ್ಿಣಿಯರಿಗೆ ಪೂರಕ ಆಹಾರ ದೊರೆಯದೇ ಇದ್ದುದರಿಂದ ಅವಳಿಗೂ ಅವಳಿಮದ ಜನಿಸುವ ಮಗುವಿಗೂ ರಕ್ತದ ಕೊರತೆ ಕಂಡುಬಂದು ಹುಟ್ಟಿದಾಗ ಮಗು ಕಡಿಮೆ ತೂಕದ್ದಾಗಿ ರೋಗಗ್ರಸ್ತವಾಗಿರುತ್ತದೆ. ಅಲ್ಲದೇ ಬಾಣಂತಿಗೂ ಕೂಡಾ ರೋಗಗಳು ಬರುವ ಸಂಭವವಿದ್ದು, ಒಂದೊಂದು ಸಮಯದಲ್ಲಿ ರಕ್ತದ ಕೊರತೆಯಿಂದಾಗಿ ತಾಯಿ ಮಗು ಇಬ್ಬರು ಅಸುನೀಗಿದ ಉದಾಹರಣೆಗಳಿವೆ. 

         ಗ್ರಾಮೀಣ ಪ್ರದೇಶದಲ್ಲಿ ದೊರೆಯಬಹುದಾದ ಹಸಿರು ತರಕಾರಿ, ಸಿರಿಧಾನ್ಯಗಳ ಬಳಕೆಯಿಂದ ಹಾಗೂ ಸರಿಯಾದ ಸಮಯದಲ್ಲಿ ವಿಶ್ರಾಂತಿ, ಧ್ಯಾನ, ಯೋಗಗಳ ಕಾರ್ಯದಲ್ಲಿ ತೊಡಗಿದರೆ ಏಕಾಗ್ರತೆ ಉಂಟಾಗಿ ಹೆರಿಗೆ ಸಮಯದಲ್ಲಿ ಯಾವುದೇ ತೊಂದರೆಯಾಗುವದಿಲ್ಲ ಎಂದರು.

       ಈ ಅಪೌಷ್ಠಿಕತೆಯ ರಕ್ತ ಹೀನತೆಯಿಂದ ಜನಿಸಿದ ಮಕ್ಕಳಿಗೆ ಅತಿಸಾರ ಬೇದಿ ಕಾಡುತ್ತಿದ್ದು, ಇದರಿಂದ ಮರಣ ಸಂಖ್ಯೆ ಹೆಚ್ಚಾಗುತ್ತಿರುವದನ್ನು ಗಮನಿಸಿದ ಸರಕಾರ ಅಂತಹ ತಾಯಿ ಮಗುವಿನ ಆರೈಕೆಗಾಗಿ ಸರಕಾರಿ ಆಸ್ಪತ್ರೆಯಲ್ಲಿ ಪುನಚ್ಛೇತನ ಕೇಂದ್ರ ಸ್ಥಾಪಿಸಲಾಗಿದ್ದು, ಅಲ್ಲಿ 14 ದಿನಗಳ ವರೆಗೆ ತಾಯಿ ಮಗುವಿನ ಆರೈಕೆ ಮಾಡುವದಲ್ಲದೇ  ತೂಕದ ಪ್ರಮಾಣ ಹೆಚ್ಚಾಗುವಂತೆ  ಮಾಡಲಾಗುತ್ತಿದೆ. ತಾಯಿ ಮಗುವಿನ ರಕ್ಷಣೆ ಉತ್ತಮ ಸಮಾಜದ ಅಭಿವೃದ್ದಿಗೆ ಕಾರಣ ಎಂಬುದೇ ಸರಕಾರ ದ್ಯೇಯವಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. 

ರೋಟಾ ವೈರಸ್ ಲಸಿಕೆ ಕುರಿತು ಎ.ಎನ್.ಎಂ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಗೀತಾ ಕಲಾದಗಿ ವಿವರಣೆ ನೀಡುತ್ತಾ, ಮಗು ಜನಿಸಿದ ಕೂಡಲೇ 1.5 ಕಿಲೋ, 2.5 ಕಿ.ಲೋ ಹಾಗೂ 3.5 ಕಿ.ಲೋ ಇದ್ದರೆ ಆ ಮಗು ಅಪೌಷ್ಠಿಕತೆ ಹಾಗೂ ರಕ್ತದ ಕೊರತೆಯಿಂದ ಬಳಲುತ್ತದೆ ಎಂದು ತಿಳಿದು ಆ ಮಗುವಿಗೆ ಅತಿಸಾರ ಬೇದಿ ಬರದಂತೆ ರೋಟಾ ವೈರಸ್ ಲಸಿಕೆಯನ್ನು ಹಾಕಲಾಗುವುದು. 

 ಇತ್ತೀಚೆಗೆ ರಕ್ತ ಹೀನತೆ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ರೋಟಾ ವೈರಸ್ ಲಸಿಕೆ ವರದಾನವಾಗಿದ್ದು, ಪರಿಣಾಮಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಎ.ಎನ್.ಎಂ ತರಬೇತಿ   ಕೇಂದ್ರದ ಪ್ರಾಚಾರ್ಯರಾದ ಸುಮಿತ್ರಾ ದಿಡಗೂರ, ಚಿಕ್ಕ ಮಕ್ಕಳ ತಜ್ಞರಾದ ಡಾಕವಿತಾ, ಡಾ.ಬೀಳಗಿ, ಡಾ.ದಿವ್ಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಹಿರಿಯ ಆರೋಯ ಸಹಾಯಕರಾದ ಪ್ರಕಾಶ ಜಾದವ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಇದೇ ಸಂದರ್ಭದಲ್ಲಿ ಪೌಷ್ಠಿಕ ಆಹಾರಗಳ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದ್ದು, ಆಸ್ಪತ್ರೆಯಲ್ಲಿರುವ ತಾಯಿಂದರಿಗೆ  ಪೌಷ್ಠಿಕ ಆಹಾರದ ಬಗ್ಗೆ ತಿಳಿಸಿಕೊಡಲಾಯಿತು. ಅಲ್ಲದೇ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾರ ಬಿರಾದಾರ ವೀಕ್ಷಿಸಿದರು