ಮಲ್ಲಿಕಾರ್ಜುನ ದೇವಸ್ಥಾನ ಕಳಸಾರೋಹಣ ಸಮಾರಂಭ
ಯಮಕನಮರಡಿ 4 : ಸಮೀಪದ ಮಣಗುತ್ತಿ ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಆಯೋಜಿಸಲಾಗಿದ್ದ ಮಲ್ಲಿಕಾರ್ಜುನ ದೇವಸ್ಥಾನದ ಕಳಸಾರೋಹಣ ಹಾಗೂ ಮಹಾರುದ್ರಯಾಗ ರುದ್ರಾಭಿಷೇಕ ಸುಮಂಗಲೆಯರ ಕುಂಭಮೇಳ ಇತ್ಯಾದಿ ಕಾರ್ಯಕ್ರಮಗಳು ದಿ25 ರಿಂದ 27 ರವರೆಗೆ ಅತೀ ವಿಜೃಂಭಣೆಯಿಂದ ಯಶಸ್ವಿಯಾಗಿ ಜರುಗಿದವು. ಪೂಜಾ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಹತ್ತರಗಿ ಕಾರಿಮಠದ ಪೂಜ್ಯರಾದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿ ಆಶಿರ್ವಚನ ನಿಡಿದರು. ಇದೇ ಸಂದರ್ಬದಲ್ಲಿ ಕೊಲ್ಲಾಪುರದ ಆನಂದ ಪೌಂಡೇಶನ ಅವರು ದೇವಸ್ಥಾನಕ್ಕೆ 2.5 ಲಕ್ಷರೂಪಾಯಿ ದೇಣಿಗೆ ಸಲ್ಲಿಸಿದರು ಅದರ ಜೋತೆಗೆ ಮಣಗುತ್ತಿ ಗ್ರಾಮದ ಆರಾಧ್ಯದೇವತೆ ಲಕ್ಷ್ಮೀ ದೇವಿ ಮಂದಿರ ಜಿರ್ಣೋದಾರಕ್ಕೆ 29 ಲಕ್ಷ ರೂಪಾಯಿ ದೇಣಿಗೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರೂ ಈ ಸಂಧರ್ಬದಲ್ಲಿ ಮಣಗುತ್ತಿ ಗ್ರಾಮದ ಸಕಲ ಭಕ್ತಾದಿಗಳು ಹಾಗೂ ಲಕ್ಷ್ಮಿ ದೇವಸ್ಥಾನ ಟ್ರಸ್ಟ ಕಮೀಟಿ ಸರ್ವ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದು ದಾಣಿಗಳಿಗೆ ಸನ್ಮಾನಿಸಿ ಗೌರವಿಸಿದರು.