ಬೆಂಗಳೂರು, ಜ. 9 ನಗರದ ವಿದ್ಯಾ ಪೀಠದಲ್ಲಿರುವ ಪೇಜಾವರ ಶ್ರೀಗಳ ಬೃಂದಾವನಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿ ದರ್ಶನ ಪಡೆದು ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಬೃಂದಾವನ ದರ್ಶನದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಪೇಜಾವರ ಶ್ರೀಗಳ ವಿಚಾರಗಳು ನಮ್ಮ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇದ್ದಿತ್ತಾದರೂ ಅದು ಸೈದ್ಧಾಂತಿಕ ಭಿನ್ನಾಭಿಪ್ರಾಯ ಮಾತ್ರವಾಗಿತ್ತು. ಶ್ರೀಗಳದ್ದು ಉದಾರ ಮನಸಾಗಿತ್ತು ಎಂದರು.
ಹಲವು ಬಾರಿ ಉಡುಪಿ ಮಠಕ್ಕೆ ಭೇಟಿ ನೀಡಿದ್ದೇನೆ. ಭೇಟಿ ಸಂದರ್ಭಗಳಲ್ಲಿ ಪರಸ್ಪರ ವಿಚಾಯಗಳನ್ನು ಮಾಡಿಕೊಳ್ಳುತ್ತಿದ್ದೆವು. ಶ್ರೀಗಳು ನಮ್ಮ ಅಭಿಪ್ರಾಯಗಳನ್ನು ಗೌರವಿಸುತ್ತಿದ್ದರು. ಧಾರ್ಮಿಕ ಚಿಂತನೆಗಳ ಜೊತೆಗೆ ದೇಶದ ಬಗ್ಗೆ ಹಲವು ಸಲಹೆಗಳನ್ನೂ ಸಹ ನೀಡುತ್ತಿದ್ದರು ಎಂದು ಖರ್ಗೆ ಹೇಳಿದರು.