ವಿಜಯಪುರ 04: ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದ ಹೋರಾಟಗಾರ ಮಲ್ಲಿಕಾರ್ಜುನ ಬಟಗಿ ಅವರ ಜನಪರ ಕಾಳಜಿ, ಸಾಮಾಜಿಕ ಸೇವೆ ಹಾಗೂ ಹೋರಾಟಗಳನ್ನು ಗುರುತಿಸಿ ಅವರನ್ನು ಅಹಿಂದ ಒಕ್ಕೂಟದ ವಿಜಯಪುರ ಜಿಲ್ಲೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಬಟಗಿ ಅವರು ಮತ್ತಷ್ಟು ಸಾಮಾಜಿಕ ಕಳಕಳಿಗೆ ಅಹಿಂದ ಒಕ್ಕೂಟದ ನಿಯಮಗಳಿಗೆ ಹಾಗೂ ಸಂವಿಧಾನ ಬದ್ಧರಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಈ ಮೂಲಕ ಆದೇಶ ಪತ್ರದಲ್ಲಿ ರಾಜ್ಯಾಧ್ಯಕ್ಷರಾದ ಫ್ರಭುಲಿಂಗ ಎಲ್. ದೊಡ್ಡಿಣಿ, ಕಾರ್ಯಾಧ್ಯಕ್ಷ ಎಂ. ಕರಡಿಕೊಪ್ಪ, ಪ್ರಧಾನ ಕಾರ್ಯದರ್ಶಿ ಭೀರಲಿಂಗ ಎನ್. ಪೂಜಾರಿ ಅವರು ತಿಳಿಸಿದ್ದಾರೆ.