ತೆಗ್ಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಮಲ್ಲಪ್ಪ ಕಾಳಗಿ,ಉಪಾಧ್ಯಕ್ಷರಾಗಿ ಭಗವಂತಪ್ಪ ಕೂಗಟಿ ಅವಿರೋಧ ಆಯ್ಕೆ
ಬೀಳಗಿ03 : ತಾಲ್ಲೂಕಿನ ತೆಗ್ಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆಯ ಅವಿರೋಧ ಆಯ್ಕೆ ನಡೆಯಿತು.ಬೀಳಗಿ: ತಾಲ್ಲೂಕಿನ ತೆಗ್ಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಪ ಕಾಳಗಿ ಉಪಾಧ್ಯಕ್ಷರಾಗಿ ಭಗವಂತಪ್ಪ ಕೂಗಟಿ ಶುಕ್ರವಾರ ಅವಿರೋಧ ಆಯ್ಕೆಯಾದರು.ಜ.3ರಂದು ನಡೆದ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಕಾಳಗಿ, ಉಪಾಧ್ಯಕ್ಷ ಸ್ಥಾನಕ್ಕೆ ಭಗವಂತಪ್ಪ ಕೂಗಟಿ ಮಾತ್ರ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಪ್ರತಿ ಸ್ಪರ್ಧಿಗಳು ಇಲ್ಲದಿರುವುದರಿಂದ ಇಬ್ಬರೂ ಅಭ್ಯರ್ಥಿಗಳನ್ನು ಕ್ರಮವಾಗಿ ಅಧ್ಯಕ್ಷ,ಉಪಾಧ್ಯಕ್ಷರೆಂದು ಚುನಾವಣೆ ಅಧಿಕಾರಿ ಆರ್ ಬಿ ಬೂದಿ ಘೋಷಣೆ ಮಾಡಿದರು.ಸದಸ್ಯರಾಗಿ ಪರಸಪ್ಪ ಉಪ್ಪಾರ,ಹನಮಂತ ಲಮಾಣಿ,ಮಲ್ಲಪ್ಪ ಸಂಕನ್ನವರ,ಶ್ರೀಕಾಂತ ಲಮಾಣಿ,ಗುರುರಾಜ ಪಾಟೀಲ,ತಿಮ್ಮಪ್ಪ ಆಲಗುಂಡಿ,ಬಸವರಾಜ ಮೇಟಿ,ಮಂಜುಳಾ ಗುಡ್ಡಾಕಾರ,ಜ್ಯೋತಿ ಭೂಷಣ್ಣವರ,ರುದ್ರ್ಪ ಕಡಪಟ್ಟಿಅವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರಿ್ಬ.ಬೂದಿ ತಿಳಿಸಿದ್ದಾರೆ. ಮುಖಂಡರಾದ ಸೋಮನಗೌಡ ಪಾಟೀಲ, ಶಂಕರ ತಳವಾರ,ಸೋಮು ಕೂಗಟಿ,ರವಿ ಮರಡಿ,ಯಲ್ಲಪ್ಪ ಸಂಶಿ, ಮಾದಪ್ಪ ಮರಡಿ ,ರಮೇಶ ನಾಯ್ಕ,ಸಿದ್ದು ಸಂಕನ್ನವರ,ಯಲ್ಲಪ್ಪ ಕುರಿ,ವಿಠ್ಠಲ ಬಿರಾದಾರ ಇದ್ದರು.