ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ: ಡಾ. ಟಿ.ಲಿಂಗರಾಜು

Malaria control is everyone's responsibility: Dr. T. Lingaraju

ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ: ಡಾ. ಟಿ.ಲಿಂಗರಾಜು


ಕೊಪ್ಪಳ 25: ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಸಹಯೋಗದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ-2025ರ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಮಲೇರಿಯಾರೋಗದ ಹರಡುವಿಕೆ ನಿಯಂತ್ರಣ ಹಾಗೂ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದಜನಜಾಗೃತಿಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು. 

ಮಲೇರಿಯಾ ನಿಯಂತ್ರಣಕ್ಕೆ ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಇಲಾಖೆಯಿಂದಎಲ್ಲಾರೀತಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ.ಪ್ರತಿ ವರ್ಷ ‘ಏಪ್ರಿಲ್ 25’ರಂದು ಪ್ರಪಂಚದಾದ್ಯಂತ ‘ವಿಶ್ವ ಮಲೇರಿಯ ದಿನ’ ವನ್ನಾಗಿಆಚರಿಸಲಾಗುತ್ತಿದೆ.ಈಗ ಮಳೆಗಾಲ ಪ್ರಾರಂಭವಾಗುತ್ತಿದ್ದು, ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ​‍್ಪಟಟು ಸೊಳ್ಳೆಗಳ ಸಂತತಿ ಹೆಚ್ಚಾಗಿ ಸೊಳ್ಳೆಗಳಿಂದ ಹರಡುವ ಮಲೇರಿಯಾದಂತಹ ರೋಗಗಳ ಹೆಚ್ಚಳವಾಗುವ ಎಲ್ಲಾ ಸಾದ್ಯತೆಇರುತ್ತದೆ.ಸಾರ್ವಜನಿಕರುತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. 

ಕೊಪ್ಪಳ ಜಲ್ಲೆಯನ್ನು 2027ರ ವೇಳೆಗೆ ಸಂಪೂರ್ಣ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಸರ್ವರ ಸಹಕಾರಅಗತ್ಯವಾಗಿದೆ.ಮಲೇರಿಯಾರೋಗವುಒಂದು ಸಾಂಕ್ರಾಮಿಕರೋಗವಾಗಿದ್ದುಇದು ಸೋಂಕಿತಅನಾಫಿಲಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದಒಬ್ಬರಿಂದಇನ್ನೊಬ್ಬರಿಗೆ ಹರಡುತ್ತದೆ ಹಾಗೂ ಈ ಸೊಳ್ಳೆಗಳು ಬಹುತೇಕ ಸಂಜೆ ಹೊತ್ತಿನಲ್ಲಿಯೇಕಚ್ಚುತ್ತವೆ ಹಾಗಾಗಿ ಜನಸಮುದಾಯವು ಸ್ವಯಂರಕ್ಷಣ ವಿಧಾನಗಳನ್ನು ಬಳಸಿ ಸೊಳ್ಳೆಗಳ ಕಚ್ಚುವಿಕೆಯಿಂದದೂರವಿರಬೇಕುಎಂದು ಹೇಳಿದರು. 

ಜಿಲ್ಲಾಆರಿ​‍್ಸ.ಹೆಚ್‌ಅಧಿಕಾರಿಡಾ. ಪ್ರಕಾಶ್ ವಿ.,ಜಿಲ್ಲಾ ಸರ್ವೇಕ್ಷಣಅಧಿಕಾರಿಡಾ. ನಂದಕುಮಾರ್,  ಜಿಲ್ಲಾಕುಷ್ಟರೋಗ ನಿವಾರಣಾಅಧಿಕಾರಿಡಾ. ಪ್ರಕಾಶ್, ಜಿಲ್ಲಾಕುಷ್ಟರೋಗ ನಿವಾರಣಾಅಧಿಕಾರಿಡಾ.ಶಶಿಧರ್, ಕೊಪ್ಪಳ ತಾಲೂಕಆರೋಗ್ಯಾಧಿಕಾರಿಡಾ.ರಾಮಾಂಜನೇಯ ಸೇರಿದಂತೆಜಿಲ್ಲಾಆರೋಗ್ಯಇಲಾಖೆಯಎಲ್ಲಾ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು, ನಗರಆರೋಗ್ಯಕೇಂದ್ರದ ವೈಧ್ಯಾಧಿಕಾರಿಗಳು ್ಘ ಸಿಬ್ಬಂದಿಗಳು ಉಪಸ್ಥಿತರಿಸಿದ್ದರು. ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಅವರುಎಲ್ಲರಿಗೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇದೆ ವೇಳೆ ಎಲ್ಲರೂ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.ಕೊಪ್ಪಳ ನಗರದಾದ್ಯಂತ ವಿಜೃಂಭಣೆಯಿಂದ ಸಂಚರಿಸಿದ ಜನಜಾಗೃತಿಜಾಥದಲ್ಲಿತೆರೆದ ವಾಹನದಲ್ಲಿ ಮಲೇರಿಯಾ ವಿರೋಧಿಜಾಗೃತಿ ಗೀತೆಗಳನ್ನು ಹಾಡುವುದರ ಮೂಲಕ ಹಾಗೂ ಜನಜಾಗೃತಿ ಕರಪತ್ರಗಳನ್ನು ಹಂಚುವುದು, ಭ್ಯಾನರ್ ಮತ್ತು ಪೋಸ್ಟರ್ಗಳನ್ನು ಪ್ರದರ್ಶಿಸಿಸುವುದರ ಮೂಲಕ ಸಾರ್ವಜನಿಕರಿಗೆಅರಿವು ಮೂಡಿಸಲಾಯಿತು.