ಸ್ವ ಉದ್ಯೋಗವನ್ನು ಕಲ್ಪಿಸಿಕೊಡಿ: ಕಾರ್ಯದರ್ಶಿ ಗೀತಾಂಜಲಿ

ಅಥಣಿ 23:  ಮಹಿಳೆಯರು ಆಥರ್ಿಕತೆಯಿಂದ ಸಬಲರಾಗಿ ಉಳಿತಾಯದೊಂದಿಗೆ ಸ್ವ ಉದ್ಯೋಗವನ್ನು ಕಲ್ಪಿಸಿಕೊಂಡಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಅಲ್ಪಸಂಖ್ಯಾತರ ಮಹಿಳಾ ಅಭಿವೃದ್ದಿಪರ ಸಹಕಾರ ಸಂಘದ ಕಾರ್ಯದರ್ಶಿ ಗೀತಾಂಜಲಿ ನೂಲಿ ಹೇಳಿದರು.

ಅವರು ಪಟ್ಟಣದ ಶಾಂತಿನಗರ ಬಡಾವಣೆಯ ಅಲ್ಪಸಂಖ್ಯಾತರ ಮಹಿಳಾ ಅಭಿವೃದ್ದಿಪರ ಸಹಕಾರ ಸಂಘದ 2019 ಮತ್ತ 20 ನೇ ಸಾಲಿನ 5 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ವಾರ್ಷಿಕ ವರದಿಯನ್ನು ಓದುತ್ತಾ ಮಾತನಾಡಿದರು.

ನಮ್ಮ ಸಹಕಾರ ಸಂಘವು 2019 ಮತ್ತು 20 ನೇ ಸಾಲಿನಲ್ಲಿ ಒಟ್ಟು 6,94,100 ರಷ್ಟು ಲಾಭಾಂಶವನ್ನು ಹೊಂದಿದ್ದು, 49,24,306 ರಷ್ಟು ಸಾಲವನ್ನು ನೀಡಲಾಗಿದೆ ಎಂದು ತಿಳಿಸಿದವರು ಬರುವಂತಾ ದಿನಮಾನದಲ್ಲಿ ನಮ್ಮ ಸಂಸ್ಥೆಯಿಂದ ಸ್ವಸಹಾಯ ಗುಂಪುಗಳನ್ನು ಮಾಡಿ ಮಹಿಳೆಯರು ದ್ಯೋಗ ಮಾಡಲು ಸಹಕರಿಸಲಿದೆ ಎಂದು ತಿಳಿಸಿದರು.

ಇದೇ ವೇಳೆ ಅಲ್ಪಸಂಖ್ಯಾತರ ಮಹಿಳಾ ಅಭಿವೃದ್ದಿಪರ ಸಹಕಾರ ಸಂಘದ ಅಧ್ಯಕ್ಷರಾದ ಲಾಲಬಿ ಡೋಂಗರಗಾಂವ ಮಾತನಾಡಿ, ಕಳೆದ 4 ವರ್ಷಗಳಿಂದ ಮಹಿಳಾ ಅಭಿವೃದ್ದಿಪರ ಸಹಕಾರ ಸಂಘವು ಒಳ್ಳೆ ಕೇಲಸಗಳನ್ನು ಮಾಡುತ್ತಾ ಬಂದು ಇವತ್ತು ಅಲ್ಪ ಸಂಖ್ಯಾತ, ಹಿಂದುಳಿದ ಹಾಗೂ ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಸಾಲವನ್ನು ನೀಡಿದೆ. ಮಹಿಳೆಯರು ಹೆಚ್ಚು ಹೆಚ್ಚಾಗಿ ಉಳಿತಾಯದ ಜೊತೆಗೆ ಹಣ ಠೇವಣಿಯನ್ನೂ ಮಾಡಿದಲ್ಲಿ ಅದಕ್ಕೆ ತಕ್ಕ ಬಡ್ಡಿ ಹಣವನ್ನೂ ಸಹ ಪಡೆಯಬಹುದು ಎಂದರು.

ಈ ವೇಳೆ ಸಂಘದ ಸದಸ್ಯರಾದ ಮುಬಿನಾ ಮಾಸ್ಟರ, ಶಹನಾಬಿ ಬಿರಾದಾರ, ರಾಬಿಯಾ ನಾಲಬಂದ,ತಾಹೇರಾಬಾನು ಡಾಂಗೆ, ದೀಲಶಾದ ಮಾಸ್ಟರ, ಅಮೀನಾಬಿ ಡೊಂಗರಗಾಂವ, ಮಹಾದೇವಿ ಬೋಗರ್ಿಕರ, ಸಮೀನಾ ಡೊಂಗರಗಾಂವ, ಶಮಶ್ಯಾದ ಗಡ್ಡೇಕರ, ಹುಸೇನಾಬಾನು ಪಟೇಲ, ನೌಶಾದ ಡೊಂಗರಗಾಂವ, ಮಾಜಿ ಶಾಸಕ ಶಹಜಾನ ಡೊಂಗರಗಾಂವ, ಐ.ಜಿ.ಬೀರಾದಾರ, ಅಸ್ಲಂ ನಾಲಬಂದ, ಅಯಾಜ ಮಾಸ್ಟರ್, ಅಬೀದ ಮಾಸ್ಟರ್ ಸೇರಿದಂತೆ ಅನೇಕರು ಇದ್ದರು.