ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಸದುಪಯೋಗಪಡಿಸಿಕೊಳ್ಳಿ: ಜಿಲ್ಲಾಧ್ಯಕ್ಷ ಕೃಷ್ಣ ಎಚ್‌. ಹಡಪದ ಕರೆ

 ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಸದುಪಯೋಗಪಡಿಸಿಕೊಳ್ಳಿ: ಜಿಲ್ಲಾಧ್ಯಕ್ಷ ಕೃಷ್ಣ ಎಚ್‌. ಹಡಪದ ಕರೆ Make use of the special intensive revision of the electoral roll: District President Krishna H. Hada

ಗದಗ 17: ಪ್ರಜಾಪ್ರಭುತ್ವದ ಅತಿ ದೊಡ್ಡ ಹಕ್ಕಾದ ಮತದಾನದ ಶಕ್ತಿಯನ್ನು ಪ್ರತಿಯೊಬ್ಬರೂ ಉಳಿಸಿಕೊಳ್ಳಬೇಕು. ಇದಕ್ಕಾಗಿ ಗದಗ ಜಿಲ್ಲೆಯ ಸವಿತಾ ಸಮಾಜದ ಎಲ್ಲಾ ಮತದಾರ ಬಾಂಧವರು ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಮತದ ಭದ್ರತೆಯನ್ನು ಕಾಪಾಡಿಕೊಳ್ಳಬೇಕು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್‌. ಹಡಪದ ಅವರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ     ಪ್ರಮುಖ ದಿನಪತ್ರಿಕೆಗಳ ಮೂಲಕ ಸಮಾಜದ ಬಾಂಧವರ ಜಾಗೃತಿಗಾಗಿ ಅವರು ಈ ಕೆಳಗಿನ ಪ್ರಮುಖ ಮನವಿಗಳನ್ನು ಮಾಡಿದ್ದಾರೆ. 

ಆಗಸ್ಟ್‌ 8 ರವರೆಗೆ ವಿಸ್ತರಣೆ:*ಚುನಾವಣಾ ಆಯೋಗವು ಬಿಎಲ್‌ಒಗಳ ಮನೆ-ಮನೆ ಭೇಟಿಯ ಅವಧಿಯನ್ನು ಆಗಸ್ಟ್‌ 8, 2026 ರ ವರೆಗೆ ವಿಸ್ತರಿಸಿದೆ. ಸಮಾಜದ ಬಾಂಧವರು ಈ ಹೆಚ್ಚಿನ ಸಮಯವನ್ನು ಕಡ್ಡಾಯವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಬಿಎಲ್‌ಒಗಳಿಗೆ ಗೌರವಯುತ ಸಹಕಾರ: ನಿಮ್ಮ ಮನೆಗೆ ಬೂತ್ ಮಟ್ಟದ ಅಧಿಕಾರಿಗಳು ಬಂದಾಗ ಅವರಿಗೆ ಪ್ರೀತಿಯಿಂದ ಗೌರವಿಸಿ, ಅವರು ಕೇಳುವ ಅಗತ್ಯ ದಾಖಲಾತಿಗಳನ್ನು ನೀಡಿ ಸಹಕರಿಸಿ. ಸ್ಥಳದಲ್ಲೇ ಅರ್ಜಿ ಭರ್ತಿ:*ಮತದಾರರ ಪಟ್ಟಿಗೆ ಹೆಸರು ಸೇರೆ​‍್ಡ, ತಿದ್ದುಪಡಿ ಅಥವಾ ಫಾರ್ಮ್‌ ಭರ್ತಿ ಮಾಡಲು ತಮಗೆ ಸಾಧ್ಯವಾಗದಿದ್ದರೆ, ಬಿಎಲ್‌ಒಗಳ ಸಹಾಯ ಪಡೆದೇ ಭರ್ತಿ ಮಾಡಿಸಿ.*ಮನೆ ಬಾಗಿಲಿಗೆ ಉಚಿತ ಸೇವೆ: ಫಾರ್ಮ್‌ ಭರ್ತಿ ಮಾಡಲು ತೊಂದರೆಯಿದ್ದಲ್ಲಿ ಸಮಾಜದ ಬಾಂಧವರು ನೇರವಾಗಿ ಜಿಲ್ಲಾ ಸಮಿತಿಯನ್ನು ಸಂಪರ್ಕಿಸಬಹುದು.