ಗದಗ 17: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಮಕ್ಕಳು ಆಟೋಟದ ಜೊತೆಗೆ ಸಕರ್ಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಶಾ ಕಾರ್ಯಕತರ್ೆ ಶೋಭಾ ಶಿವಬಸಣ್ಣವರ ಹೇಳಿದರು.
ಶಿರಹಟ್ಟಿ ತಾಲೂಕಿನ ಗುಲಗಂಜಿಕೊಪ್ಪ ಗ್ರಾಮದ ಯಮನೂರಜ್ಜನ ದರ್ಗಾದ ಹತ್ತಿರದಲ್ಲಿ ನಡೆದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಜಾನಪದ ಸಂಗೀತ ಮತ್ತು ಬೀದಿ ನಾಟಕದ ಮೂಲಕ ಸರ್ಕಾರದ ಯೋಜನೆಯ ಕುರಿತು ಜನ ಜಾಗೃತಿ ಮೂಡಿಸಲು ಕ್ಷೇತ್ರ ಪ್ರಚಾರ ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯ ಮುಖಂಡರಾದ ಬಸಪ್ಪ ಶಿವಬಸಣ್ಣವರ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಶ್ರೀ ಸಿದ್ದಲಿಂಗೇಶ್ವರ ಜಾನಪದ ಕಲಾ ತಂಡ ಅಡವಿಸೋಮಾಪೂರ ಹಾಗೂ ಶ್ರೀ ಗುರು ಶಿಷ್ಯ ಪರಂಪರೆ ಜಾನಪದ ಕಲಾ ತಂಡ ಲಕ್ಕುಂಡಿ ತಂಡದವರು ರಾಜ್ಯ ಸರ್ಕಾರ ನೇಕಾರ ಮತ್ತು ಮೀನುಗಾರರ ಸಾಲಮನ್ನಾ, ರೈತ ಸಮ್ಮಾನ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕ ಹೆಚ್ಚುವರಿ 4 ಸಾವಿರ ರೂ. ನೀಡುತ್ತಿರುವ ಸೌಲಭ್ಯದ ಯೋಜನೆ ಸೇರಿದಂತೆ ಪ್ರತಿಗ್ರಾಮದ ಸ್ವಚ್ಛತೆ ಹಾಗೂ ಸರಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭರಮಗೌಡ ಹೊಸಗೌಡ, ನಾಗಪ್ಪ ದುರಗಣ್ಣವರ, ರೇಣವ್ವ ದುರಗಣ್ಣವರ ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿ ಇದ್ದರು.