ಅಂಚೆ ಇಲಾಖೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ: ವಿಭಾಗದ ಅಂಚೆ ಅಧೀಕ್ಷಕ ಕೆ. ಬಸವರಾಜ


ಕೊಪ್ಪಳ: ಅಂಚೆ ಇಲಾಖೆ ಒಂದು ವಿಶೇಷವಾದ ಇಲಾಖೆಯಾಗಿದೆ. ಜನರಿಗಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಅಂಚೆ ಇಲಾಖೆಯ ಜೊತೆಗೆ ಬ್ಯಾಂಕಿಂಗ್ ವ್ಯವಸ್ಥೆ, ವಿಮಾ ಸೌಲಭ್ಯಗಳು, ಪಾಸ್ಫೊರ್ಟ ಸೇವಾಕೇಂದ್ರ, ಆಧಾರ ನೋಂದಣಿ, ಮೈ ಸ್ಟ್ಯಾಂಪ್ (ಸ್ವಭಾವ ಚಿತ್ರದ ಅಂಚೆ ಚೀಟಿ), ಸಾಮಾಜಿಕ ಭದ್ರತಾ ಯೋಜನೆಯಡಿ ಪೆನ್ಸನ್ಗಳ ವಿತರಣೆ, ಪಿಲಾಟಲಿ ಅಂಚೆ ಚೀಟಿಗಳ ಮಾರಾಟ ಮುಂತಾದ ಹತ್ತು ಹಲವು ಕಾರ್ಯಗಳನ್ನು ಅಂಚೆ ಇಲಾಖೆಯು ಸಿಬ್ಬಂದಿ ಕೊರತೆಯು ನಡುವೆಯೂ ಮಾಡುತ್ತಾ ಬರುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಗದಗ ವಿಭಾಗದ ಅಂಚೆ ಅಧೀಕ್ಷಕ ಕೆ.ಬಸವರಾಜ ಹೇಳಿದರು.

ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕೊಪ್ಪಳದ ಪ್ರಧಾನ ಅಂಚೆ ಕಛೇರಿ ಸಿಬ್ಬಂದಿಯು ಹಮ್ಮಿಕೊಂಡ  ಅಂಚೆ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೊಪ್ಪಳದ ಪ್ರಧಾನ ಅಂಚೆ ಕಛೇರಿಯ ಮಾರುಕಟ್ಟೆ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಸುಭಾನ ಅವರು ಮಾತನಾಡುತ್ತಾ, ಭಾರತೀಯ ಅಂಚೆ ಇಲಾಖೆಯು ಅನೇಕ ಇಲಾಖೆಗಳ ಕೆಲಸ ಮಾಡುತ್ತಿದ್ದು, ಇದೊಂದು ಸಂಯುಕ್ತವಾದ ಇಲಾಖೆಯಾಗಿದೆ. ಅಂಚೆಯವರೆಂದರೆ ಬರೀ ಸುದ್ದಿ ತಿಳಿಸುವವರು, ಪತ್ರ ತರುವವರು, ತಲುಪಿಸುವವರು ಎಂದೆಲ್ಲ ಇಂದಿಗೂ ಜನಸಾಮನ್ಯರು, ಕೆಲವು ವಿದ್ಯಾವಂತರು ಕೂಡ ತಿಳಿದುಕೊಂಡಿದ್ದಾರೆ. ಆದರೆ ಇದರ ಜೊತೆಗೆ ಪಾಸ್ಫೋರ್ಟ್ ಸೇವಾ ಕೇಂದ್ರ, ಆಧಾರ್ ನೋಂದಣಿಯ ಜೊತೆಗೆ, ವಿದ್ಯಾರ್ಥಿಗಳಿಗಾಗಿ ಪಿಲೆಟಲಿ ಖಾತೆಗಳನ್ನು ತೆರೆಯುವುದು, ಕೇಂದ್ರ ಸರಕಾರದ ವಿಶೇಷ ಯೋಜನೆಯಡಿ ಅತ್ಯಂತ ರಿಯಾಯತಿ ದರದಲ್ಲಿ ಎಲ್.ಇ.ಡಿ ಬಲ್ಪಗಳ ಮಾರಾಟ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಜೀವನಜ್ಯೋತಿ ಯೋಜನೆ, ಅಟಲ್ಪೆನ್ಸನ್ ಯೋಜನೆ, ಡೈರೆಕ್ಟ್ ಫೋಸ್ಟ್, ಮೀಡಿಯಾ ಫೋಸ್ಟ್, ಹೆಣ್ಣು ಮಕ್ಕಳಿಗಾಗಿ ವಿಶೇಷವಾಗಿರುವ ಸುಕನ್ಯಾ ಸಮೃದ್ಧಿ ಯೋಜನೆ "ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ಓದಿಸಿ", ಉಳಿತಾಯ ಯೋಜನೆಗಳು ಹೀಗೆ ಹತ್ತಾರು ಕೆಲಸಗಳನ್ನು ಅಂಚೆ ಇಲಾಖೆಯು ಮಾಡುತ್ತಿರುವುದು ಸಂತಸದ ಸಂಗತಿ ಎಂದರು. 

ಭಾರತೀಯ ಅಂಚೆ ನೌಕರರ ಕೊಪ್ಪಳ ಶಾಖೆಯ ಅಧ್ಯಕ್ಷರಾದ ಜಿ.ಎನ್.ಹಳ್ಳಿ, ಪ್ರಧಾನ ಅಂಚೆ ಪಾಲಕರಾದ ಬಿ.ವಿ.ಅಂಗಡಿ, ಗದಗಿನ ಮಾರುಕಟ್ಟೆಯ ಕಾರ್ಯನಿರ್ವಾಹಕರಾದ ಸುಭಾಸ ಎಂ., ಕೊಪ್ಪಳ ಪ್ರಧಾನ ಅಂಚೆ ಕಛೇರಿಯ ಡಿ.ಎಂ.ದ್ರಾಕ್ಷಿ, ಸವರ್ೋತ್ತಮ ಉಪಾಧ್ಯಾಯ, ಹನುಮಂತರಾವ್, ಪಾಸ್ಫೋರ್ಟ್  ಕಛೇರಿಯ ಕಿರಣ ಜೋಶಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.