ಆರೋಗ್ಯ ಯೋಜನೆ ಬಳಕೆ ಮಾಡಿಕೊಳ್ಳಿ : ಡಾ.ಲಿಂಗರಾಜ್

ಕೊಪ್ಪಳ 28: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಒಂದು ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು, ಎಲ್ಲರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜ ಹೇಳಿದರು.

ಅವರು ಮಂಗಳವಾರ ನಗರದ ಹಾಲವರ್ತಿ  ರಸ್ತೆಯ ಬಳಿ ಇರುವ ಎಂಎಸ್ಕೆ ಗಾಮರ್ೆಂಟ್ಸ್ ಸಭಾಂಗಣದಲ್ಲಿ ಕರ್ನಾಟಕ ಒನ್ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ ಗುರುತಿನ ಚೀಟಿ ಸಾರ್ವಜನಿಕರಿಗೆ ವಿತರಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಸರಕಾರ ಜಾರಿಗೊಳಿಸಿದ ಸದರಿ ಯೋಜನೆಯ ಲಾಭ ಪಡೆದುಕೊಳ್ಳಲು ಮತ್ತು ಆರೋಗ್ಯ ಕಾಡರ್್ ಪಡೆಯಲು ರೇಶನ್ ಕಾರ್ಡ್  ಆಧಾರ ಕಾಡರ್್ಗಳ ಝರಾಕ್ಸ್ ಪ್ರತಿ ನೀಡಿ ಎಲ್ಲಾ ನಾಗರೀಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು. ಅದೇ ರೀತಿ ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಪಾಡಿಕೊಂಡು ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜ ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಎಂ.ಸಾಧಿಕ್ ಅಲಿ ಮಾತನಾಡಿ, ಎಲ್ಲಾ ರೋಗಗಳ ಮೂಲ ಅಸ್ವಚ್ಛತೆಯಾಗಿದ್ದು ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಬೇಕು ಎಂದ ಅವರು, ಡಿಎಚ್ಓ ಡಾ.ಲಿಂಗರಾಜ ಅವರು ಉತ್ತಮ ಕೆಲಸ ಮಾಡುತ್ತ ಆರೋಗ್ಯ ಮತ್ತು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸರಕಾರದಿಂದ ಸಿಗಬಹುದಾದ ಸೌಕರ್ಯಗಳನ್ನು ಜನತೆಗೆ ದೊರಕಿಸಿಕೊಡಲು ಶ್ರಮಿಸುತ್ತಿದ್ದಾರೆ ಎಂದು ಅವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಎಂಎಸ್ಕೆ ಗಾಮರ್ೆಂಟ್ಸ್ನ ಮುಖ್ಯಸ್ಥ ಹಾಗೂ ಕಾರ್ಯಕ್ರಮದ ಆಯೋಜಕರಾದ ಶಫೀಕ್ ಅಹ್ಮದ್ ರವರು ವಹಿಸಿದ್ದರು. ಅಂಜುಮನ್ ಕಮೀಟಿಯ ಹಿರಿಯ ಸದಸ್ಯ ಅಬ್ದುಲ್ ಅಜೀಜ್ ಮಾನ್ವೀಕರ್ ಅತಿಥಿಗಳಾಗಿ ಪಾಲ್ಗೊಂಡಿದ್ದು, ಸಮಾಜದ ಯುವ ನಾಯಕ ಸಲೀಂ ಮಂಡಲಗಿರಿ ಅವರು ಆರಂಭದಲ್ಲಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಸಾರ್ವಜನಿಕರಿಗೆ ಅತಿಥಿಗಳಿಂದ ಆರೋಗ್ಯ ಕಾಡರ್್ ವಿತರಣೆ ಮಾಡಿಸಿ ನಂತರ ಕೊನೆಯಲ್ಲಿ ವಂದಿಸಿದರು.