ಗೋಕಾಕ: ಕಲಿಕಾ- ಭೋಧನಾ ಪರಿಕರಗಳ ಸದುಪಯೋಗಪಡಿಸಿಕೊಳ್ಳಿ: ಪಾಟೀಲ
ಲೋಕದರ್ಶನ ವರದಿ
ಗೋಕಾಕ 15: ನಾಗನೂರ ಬಡ್ಸ್ ಸಂಸ್ಥೆ ಹಾಗೂ ಜಪಾನ ಎನ್ಎಫ್ಯುಎ ಸಹಯೋಗದಲ್ಲಿ ನೀಡುವ ಕಲಿಕಾ ಮತ್ತು ಭೋಧನಾ ಪರಿಕರಗಳ ಸದುಪಯೋಗವನ್ನು ಶಾಲಾ ಮಕ್ಕಳು ಪಡೆದುಕೊಳ್ಳಬೇಕು ಎಂದು ನಾಗನೂರ ಬಡ್ಸ್ ಸಂಸ್ಥೆಯ ಕಾರ್ಯನಿವರ್ಾಹಕ ನಿದರ್ೇಶಕ ಆರ್.ಎಮ್.ಪಾಟೀಲ ಹೇಳಿದರು.
ನಾಗನೂರ ಬಡ್ಸ್ ಸಂಸ್ಥೆ ಹಾಗೂ ಜಪಾನ ಎನ್ಎಫ್ಯುಎ ಸಹಯೋಗದಲ್ಲಿ ಶನಿವಾರ ಡಿ.14 ರಂದು ನಡೆದ ಪ್ರವಾಹೊತ್ತರ ಶೈಕ್ಷಣಿಕ ಪುನರ್ವಸತಿ ಯೋಜನೆ ಅಡಿಯಲ್ಲಿ ಸಮೀಪದ ಉದಗಟ್ಟಿ ಗ್ರಾಮದ ಸಕರ್ಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಎಲ್ಲ ಮಕ್ಕಳಿಗೆ ಕಲಿಕಾ ಮತ್ತು ಭೋದನಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಗೋಕಾಕ-ಮೂಡಲಗಿ ತಾಲೂಕಿನ ಹಲವಾರು ಹಳ್ಳಿಗಳ ರೈತರು, ನಾಗರಿಕರು ಪ್ರವಾಹಕ್ಕೆ ಸಿಲುಕಿ ಮನೆ, ಬೆಳೆಗಳನ್ನು ಕಳೆದುಕೊಂಡದ್ದು ಶೋಚನೀಯ ಸಂಗತಿಯಾಗಿದೆ ಎಂದರು.
ಉದಗಟ್ಟಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ 392 ಮಕ್ಕಳಿಗೆ, ಭಾಗನ್ನವರ ತೋಟದ ಸಕರ್ಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ 73 ಮಕ್ಕಳಿಗೆ, ನಾಗಲಿಂಗೇಶ್ವರ ತೋಟದ ಸಕರ್ಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ 64 ಮಕ್ಕಳಿಗೆ ಕಲಿಕಾ ಪರಿಕರ ಮತ್ತು ಶಾಲೆಗೆ ಭೋಧನಾ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಬಡ್ಸ್ ಎನ್ಸಿಡಿಪಿ ಯೋಜನೆಯ ಕಾರ್ಯಕ್ರಮ ಅಧಿಕಾರಿ ಅಶೋಕ ಪೂಜಾರಿ ತಿಳಿಸಿದರು.
ಮಹೇಶ ನೀಲಗಾರ, ಮಲಕಾರಿ ವಡೇರ, ಬಸರೆಪ್ಪ ಶಿಗಿಹಳ್ಳಿ, ತುಕ್ಕಾನಟ್ಟಿ ಬಡ್ಸ್ ಬಿ.ಎಸ್.ಡಬ್ಲೂ ಕಾಲೇಜಿನ ವಿದ್ಯಾಥರ್ಿಗಳು, ಸಿಎಲ್ಸಿ-ಎಮ್ಸಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಸಕರ್ಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕರು, ಶಿಕ್ಷಣಪ್ರೇಮಿಗಳು, ಹಿರಿಯ ನಾಗರಿಕರು, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಇತರರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 