ಲೋಕದರ್ಶನವರದಿ
ಹುನಗುಂದ: ಗಭರ್ಿಣಿಯರು ಮತ್ತು ಬಾಣಂತಿಯರು ಹಾಗೂ ಮಕ್ಕಳಲ್ಲಿ ಕಂಡು ಬರುವ ಅಪೌಷ್ಠಿಕತೆ ನಿವಾರಿಸಲು ಸಕರ್ಾರ ಹಲವಾರು ಯೋಜನೆಯನ್ನು ಜಾರಿಗೆ ತಂದಿದ್ದು ಅದರ ಸದುಪಯೋಗವನ್ನು ಪಡೆಸಿಕೊಳ್ಳಬೇಕು ಎಂದು ತಾಲೂಕ ಹದಿಹರೆಯದವರ ಆರೋಗ್ಯ ಆಪ್ತ ಸಮಾಲೋಚಕ ಮಂಜುನಾಥ ಹೊಸಮನಿ ಹೇಳಿದರು.
ಸೋಮವಾರ ಪಟ್ಟಣದ ಬಾದವಾಡಗಿ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯತಿ,ಜಿಲ್ಲಾ ಆಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪಟ್ಟಣದ 6 ಅಂಗನವಾಡಿ ಕೇಂದ್ರಗಳ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಯಿ ಮತ್ತು ಮಗು ಆರೋಗ್ಯವನ್ನು ಕಾಪಾಡಿಕೊಳ್ಳಲು ಸತ್ವಯುತ ಹಾಗೂ ಪೌಷ್ಠಿಕ ಆಹಾರ ಸೇವನೆ ಮಾಡುವುದು ಅವಶ್ಯ. ಅಪೌಷ್ಠಿಕತೆಯನ್ನು ಹೋಗಲಾಡಿಸಲು ಶುದ್ದ ಆಹಾರ ಮತ್ತು ಸ್ವಚ್ಚ ನೀರು ಹಾಗೂ ವಿವಿಧ ತರಹದ ಕಾಳು ಮತ್ತು ತರಕಾರಿಗಳು ಗಭರ್ಿಣಿಯರಿಗೆ ನೀಡುವುದು ಒಳ್ಳೆಯದು ಇಂತಹ ಅನೇಕ ತಾಯಿ ಮತ್ತು ಮಗುವಿನ ಪೋಷಣೆ ಅರಿವು ಮೂಡಿಸುವ ಉದ್ದೇಶದಿಂದ ಈ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮುದಾಯ ಆರೋಗ್ಯ ಅಧಿಕಾರಿ ಅಶ್ವಿನಿ ಕಂಠಿ ಮಾತನಾಡಿ ತಾಯಿ ಮತ್ತು ಮಗು ಬಾಂಧವ್ಯ ಶಿಶು ಜನಸಿದ ಮೇಲೆ ಆರಂಭವಾಗುವುದು. ತಾಯಿ ಮಗುವಿಗೆ ತೊಂದರೆಯಾಗುವುದು ಗಭರ್ಾವಸ್ಥೆಯಲ್ಲಿ ಸರಿಯಾದ ಆರೈಕೆಯಿಲ್ಲದೇ ಇರುವುದರಿಂದ ಅನೇಕ ಸಮಸ್ಯೆಗಳು ಸಂಭವಿಸುತ್ತವೆ ಅದರ ಬಗ್ಗೆ ತಾಯಿಯಂದರು ಜಾಗೃತರಾಗಿರಬೇಕು ಎಂದರು.ಇದೇ ಸಂದರ್ಭದಲ್ಲಿ ಮಾತೃ ವಂದನಾ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಯಿತು.
ಎಂ.ಎಸ್.ಶಿರೋಳ, ಎ.ಬಿ.ಚಿತ್ತರಗಿ, ಆರ್.ಎಚ್.ಬಳಿಗಾರ, ಎಲ್.ಎಸ್.ಕರಡಿ, ತುಂಗಾ ಮಳಗಿ, ಎಸ್.ಎಂ.ಜುಗಳೂರ, ಸಿಕೆ.ಬಂಡರಗಲ್ಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.