ಲೋಕದರ್ಶನವರದಿ
ಗುಳೇದಗುಡ್ಡ ಮಾ.3: ಪ್ರತಿಯೊಬ್ಬರೂ ತಮ್ಮಲ್ಲಿರುವ ಕೀಳಿರಿಮೆ ಭಾವನೆಯನ್ನು ತೊರೆಯುವವರೆಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಒಬ್ಬಶಿಲ್ಪಿ ಒಂದು ಶಿಲೆಯನ್ನು ಕೆತ್ತಿ ಮೂತರ್ಿರೂಪ ಮಾಡಿದಂತೆ, ವಿದ್ಯಾಥರ್ಿಗಳ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಶಿಕ್ಷಕರ ಶ್ರಮ ಅಪಾರ. ಇಂತಹ ಕರ್ತವ್ಯನಿಷ್ಠ ಶಿಕ್ಷಕರಿಗೆ ಹಾಗೂ ಕಲಿತ ಶಾಲೆಗೆ ವಿದ್ಯಾಥರ್ಿಗಳು ಕೀತರ್ಿ ತರುವಂತವರಾಗಬೇಕು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ, ನಿವೃತ್ತ ಶಿಕ್ಷಕಿ ಶಾಂತಾ ಕರಡಿಗುಡ್ಡ ಹೇಳಿದ್ದಾರೆ.
ಪಟ್ಟಣದ ಪ್ರತಿಷ್ಠಿತ ಪಿಇಟಿಯ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳಿಗೆ ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇದೇ ಸಂಧರ್ಭದಲ್ಲಿ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳು ಸವಿನೆನಪಿಗಾಗಿ ಡ್ರಮ್ಸೆಟ್ಟನ್ನು ಶಾಲೆಗೆ ಕಾಣಿಕೆಯಾಗಿ ನೀಡಿದರು.
ಶಾಲೆಯ ಚೇರಮನ್ ಅಶೋಕ ಎನ್. ಹೆಗಡಿ, ಸಂಸ್ಥೆಯ ನಿದರ್ೇಶಕ ಅಮಾತೆಪ್ಪ ಕೊಪ್ಪಳ, ಹೆಚ್.ವಿ.ಹೊಕ್ರಾಣಿ, ಪೂರ್ವ ಪ್ರಾಥಮಿಕ ಶಾಲೆಯ ಚೇರಮನ್ ಗಂಗಮ್ಮ ಅಂಗಡಿ, ಎಮ್.ಪಿ.ಕಾವಡೆ ಮುಖ್ಯ ಗುರುಮಾತೆ ಜೆ.ಜೆ.ಲೋಬೋ, ವಿ.ಬಿ.ಹಳ್ಳೂರ,ಸುಜಾತಾ ಕರಡಿಗುಡ್ಡ, ಬಿ.ಆಯ್.ಯಳಮೇಲಿ, ಎಸ್.ಬಿ.ಖೋತ್ ಮತ್ತು ವಿದ್ಯಾಥರ್ಿ ಪ್ರತಿನಿಧಿಗಳಾದ ಕುಮಾರ ಪ್ರಥಮೇಶ ವಾಗ್ಮೋಡೆ, ರೇಣುಕಾ ಧೋಂಗಡೆ ಉಪಸ್ಥಿತರಿದ್ದರು.