ಬಾಗಲಕೋಟೆ: ಮಕ್ಕಳು ವಿಕಲತೆಯುಳ್ಳವರು ಎಂದು ನೊಂದುಕೊಳ್ಳದೇ ಪಾಲಕರು ಅವರ ಬದುಕನ್ನು ಹಸನಗೊಳಿಸಲು ಮುಂದಾಗಬೇಕೆಂದು ತಾಲೂಕಾ ಪಂಚಾಯತ ಅಧ್ಯಕ್ಷ ಚನ್ನನಗೌಡರ ಪರನಗೌಡರ ತಿಳಿಸಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಹಾಗೂ ವಿವಿಧ ವಿಕಲಚೇತನರ ಕ್ಷೇಮಾಭಿವೃದ್ದಿ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಅಂಗವಿಕಲತೆ ಶಾಪವಲ್ಲ. ಹಲವಾರು ವಿಕಲಚೇರತನರು ಸಾಧನೆಗೈದಿದ್ದಾರೆ. ತಮ್ಮ ಮಕ್ಕಳನ್ನು ಸಾಮಾಜಿಕವಾಗಿ ಮುಂಚೂನಿಯಲ್ಲಿತರುವ ಕೆಲಸ ಪಾಲಕರದ್ದಾಗಿದೆ. ಸರಕಾರಿಂದ ವಿಕಲಚೇತನರಿಗೆ ಸಾಕಷ್ಟು ಸೌಲಭ್ಯಗಳು ಇದ್ದು, ಅವುಗಳ ಸದುಯೋಗ ಪಡಿಸಿಕೊಂಡು ವಿಕಲಾಂಗತೆಹೊಂದಿದ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಇತರರಂತೆ ತಾವು ಬದುಕುವಂತೆ ಅವರ ಬದುಕನ್ನು ರೂಪಿಸಲು ಮುಂದಾಗಬೇಕು ಎಂದರು. ಸರಕಾರ ಹಮ್ಮಿಕೊಂಡ ಇಂತಹ ಕಾರ್ಯಕ್ರಮ ವಿಕಲಚೇತನರಿಗೆ ಸ್ಪೂತರ್ಿಯಾಗಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಮಾರೇಶ್ವರ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ.ಮಹಾಜಬಿನ್ ಮದರಕರ ಅವರು ಮನುಷ್ಯನಿಗೆ ಸಾಧನೆ ಮುಖ್ಯವಾಗಿರಬೇಕು. ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನಿಸಿದಂತೆ, ಜೀವನದಲ್ಲಿ ಆದರ್ಶ ಮುಖ್ಯವಾಗಿದ್ದು, ದೈಹಿಕವಾಗಿ ಸದೃಡನಾಗದಿದ್ದರೂ ದೃಡ ಸಂಕಲ್ಪವೊಂದಿದ್ದರೆ ಸಾಕು ಸಾಧನೆ ಮಾಡಬಹುದಾಗಿದೆ. ಜೀವನದಲ್ಲಿ ಕಷ್ಟ, ಕಾರ್ಪಣ್ಯಗಳು ಬಂದೊದಗಿದರೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಯೋಚಿಸಬೇಕೆಂದು ತಿಳಿಸಿದರು.
ಹುಟ್ಟಿನಿಂದಲೂ ಅಂಗವಿಕತೆ ಹೊಂದಿದ್ದರೂ ಸಹ ಕಷ್ಟಪಟ್ಟು ಓದಿ ಎಂ.ಬಿ.ಬಿ.ಎಸ್ನಲ್ಲಿ ಗೋಲ್ಡ ಮೆಡಲ್, ಎಂಡಿ ಪ್ರವೇಶ ಪರೀಕ್ಷಯಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದು ಸದ್ಯ ಕುಮಾರೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು. ಸಾಧನೆಗೆ ಮುಖ್ಯವಾಗಿ ಆತ್ಮ ವಿಶ್ವಾಸದ ಮೇಲೆ ನಂಬಿಕೆ ಇಟ್ಟು ಸಾಧನೆ ಮಾಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಮಾತನಾಡಿ ಭಾರತ ದೇಶವು ವಿಶ್ವದಲ್ಲೇ ವಿವಿಧತೆಯಲ್ಲಿ ಏಕತೆಯನ್ನು ತೋರಿಸಿದ್ದು, 2011ರ ಸಮೀಕ್ಷೆಯ ಪ್ರಕಾರ ಭಾರತ ದೇಶದ ಒಟ್ಟು ಜನಸಂಖ್ಯೆ 121.80 ಕೋಟಿ ಇದ್ದು, ಅದರಲ್ಲಿ ವಿಕಲಚೇತನರು ಒಟ್ಟು 2.86 ಕೋಟಿ, ರಾಜ್ಯದಲ್ಲಿ ಒಟ್ಟು 6.41 ಕೋಟಿ ಜನಸಂಖ್ಯೆಗೆ 13.24 ಲಕ್ಷ ವಿಕಲಚೇತನರಿದ್ದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 18.89 ಲಕ್ಷ ಜನರಲ್ಲಿ 42 ಸಾವಿರ ವಿಕಲಚೇತನರಿದ್ದಾರೆಂದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಕಲಚೇತನರನ್ನು ಸಮಾಜದಲ್ಲಿ ಎಲ್ಲರಂತೆ ಸಮಾನವಾಗಿ ಪರಿಗಣಿಡಿ ಸಮಾನರಂತೆ ಬಾಳಲು ಅವಕಾಶ ನೀಡಿ ಅವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿಶಿಷ್ಟ ಗುರುತಿನ ಚೀಟಿ, ವಿದ್ಯಾಥರ್ಿ ವೇತನ, ಪ್ರೋತ್ಸಾಹಧನ, ಶುಲ್ಕ ಮರುಪಾವತಿ, ವಿವಾಹ ಪ್ರೋತ್ಸಾಹಧನ, ಆಧಾರಯೋಜನೆ ಸೇರಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು, ಇದರ ಸದುಪಯೋಗವನ್ನು ವಿಕಲಚೇತನರು ಪಡೆದುಕೊಳ್ಳಲು ಕೋರಿದರು.
ಜಿ.ಪಂ ಉಪಕಾರ್ಯದಶರ್ಿ ಎ.ಜಿ.ತೋಟದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿವಿಧ ವಿಕಲಚೇತನರ ಶಾಲೆಗಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಎಸ್.ಎಸ್.ಗುಳೇದ, ಗೌರಮ್ಮ ಸಂಕಿನ, ವಿವಿಧ ವಿಕಲಚೇತನರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಪರಶುರಾಮ, ಶೇಖರ ಕಾಖಂಡಕಿ, ರಾಜು ತೇರದಾಳ, ಎ.ಎಂ.ಜೋಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.