ರಾಯಬಾಗ: ಪಟ್ಟಣದಲ್ಲಿ ಫೆ.19 ರಂದು ನಡೆಯಲಿರುವ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ತಪ್ಪದೇ ಸಕ್ರಿಯವಾಗಿ ಭಾಗವಹಿಸಿ, ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ತಹಶೀಲ್ದಾರ ಸುರೇಶ ಮುಂಜೆ ಹೇಳಿದರು.
ಶುಕ್ರವಾರ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸಮ್ಮೇಳನದ ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ರಾಯಬಾಗ ಕ್ಷೇತ್ರ ಸಾಹಿತ್ಯ ಪರಂಪರೆಯ ನೆಲೆಯಾಗಿದೆ. ಎಲ್ಲ ಇಲಾಖೆಯವರು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಕೂಡಿಕೊಂಡು, ಪ್ರತಿ ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನದ ಬಗ್ಗೆ ಪ್ರಚಾರ ಕೈಗೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಸಾಹಿತ್ಯ ಸಮ್ಮೇಳನದ ದಿನದಂದು ಪಟ್ಟಣದ ಎಲ್ಲ ನಾಗರಿಕರು ತಮ್ಮ ಮನೆ ಅಂಗಳದಲ್ಲಿ ರಂಗೋಲಿ ಬಿಡಿಸಿ, ಮನೆ ಮೇಲೆ ಕನ್ನಡ ಧ್ವಜ ಹಾರಿಸಬೇಕೆಂದರು. ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ತಾಲೂಕಿನ ಹಿರಿಯನ್ನು ಗುರ್ತಿಸಿ ಸಮ್ಮೇಳನದಲ್ಲಿ ಅವರನ್ನು ಸತ್ಕರಿಸುವ ಕಾರ್ಯ ನಡೆಯಬೇಕೆಂದರು.
ಶಂಕರ ಕ್ಯಾಸ್ತಿ ಅವರು ಸಮ್ಮೇಳನದ ರೂಪುರೇಷೆ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಕಂಡ ಅಪರೂಪದ ಸಂಶೋಧಕ ಪ್ರೊ.ಜ್ಯೋತಿ ಹೊಸುರ ಅವರ ಹೆಸರನ್ನು ಸಮ್ಮೇಳನದ ಪ್ರಮುಖ ವೇದಿಕೆಗೆ ಮತ್ತು ಪಟ್ಟಣದ ರಸ್ತೆ ಮಾರ್ಗ ಒಂದಕ್ಕೆ ಅವರ ಹೆಸರು ಇಡಬೇಕೆಂದು ಚಿತ್ರ ಕಲಾವಿದ ಬಾಬುರಾವ ನಡೋಣಿ ಮನವಿ ಮಾಡಿಕೊಂಡರು.
ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ರವೀಂದ್ರ ಪಾಟೀಲ, ಕುಡಚಿ ಹೋಬಳಿ ಅಧ್ಯಕ್ಷ ಸಂತೋಷ ಸನದಿ, ತಾ.ಪಂ.ಇಒ ಅರುಣ ಮಾಚಕನೂರ, ಸಾಹಿತಿ ಶಿವಾನಂದ ಬೆಳಕೂಡ, ಬಸವರಾಜ ಸನದಿ, ಅನೀಲ ಶೆಟ್ಟಿ, ಅಧಿಕಾರಿಗಳಾದ ಡಾ.ಎಸ್.ಎಮ್.ಪಾಟೀಲ, ಆರಿ್ಬ.ಮನವಡ್ಡರ, ಎಸ್.ಆರ್.ಮಾಂಗ, ಬಸವರಾಜಪ್ಪ ಆರ್, ರವಿ ಸಂಕನಗೌಡರ, ಡಾ.ಎಮ್.ಬಿ.ಪಾಟೀಲ, ಕಲ್ಪನಾ ಕಾಂಬಳೆ, ವಾಯ್.ಎಸ್.ಸನಮನಿ, ಭಾರತಿ ಕಾಂಬಳೆ, ಪ್ರಕಾಶ ಮಾನೆ, ಎಮ್.ಪಿ.ಜಿರಗ್ಯಾಳ, ಟಿ.ಎಸ್.ವಂಟಗೂಡಿ, ಸುಕುಮಾರ ಕಾಂಬಳೆ, ಕುಮಾರ ಅವಳೆ, ವಿನಾಯಕ ಭಾಟೆ ಸೇರಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.