ರಾಯಬಾಗ 10: ಪ್ರಥಮ ಬಾರಿಗೆ ಚಿಕ್ಕೋಡಿಯಲ್ಲಿ ಸತೀಶ ಪೌಂಡೇಶನ್ ವತಿಯಿಂದ ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿಯವರ ಪ್ರತಿನಿಧಿಸುವ ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿನ ಈ ಭಾಗದ ಪ್ರತಿಭೆಗಳಿಗೆ ಒಂದು ವೇದಿಕೆ ಕಲ್ಪಿಸಲು ಸತೀಶ ಅವಾರ್ಡ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಯಬಾಗ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೇಳಿದರು.
ಮಂಗಳವಾರ ಪಟ್ಟಣದ ಕಾಂಗ್ರೆಸ ಕಚೇರಿಯಲ್ಲಿ ನಡೆದ ಸತೀಶ ಅವಾರ್ಡ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬರುವ ಡಿ.14 ಮತ್ತು 15 ರಂದು ಸತೀಶ ಅವಾರ್ಡ ಕಾರ್ಯಕ್ರಮ ಮತ್ತು ಡಿ.16 ರಂದು ಬಾಡಿ ಬಿಲ್ಡರ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಈ ಭಾಗದ ಪ್ರತಿಭಾವಂತ ಯುವ ಕಲಾವಿದರು ಪಡೆದುಕೊಳ್ಳಬೇಕೆಂದರು. ಕಾಂಗ್ರೆಸ ಮುಖಂಡ ಶಿವು ಪಾಟೀಲ ಮಾತನಾಡಿ, ಪ್ರಥಮ ಬಾರಿ ಗೋಕಾಕ ಪಟ್ಟಣದ ಹೊರಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ ವಿವಿಧ ಶಾಲೆಗಳಿಂದ 800 ಶಾಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಇದೊಂದು ಅತ್ಯುತ್ತಮ ವೇದಿಕೆ ಆಗಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ ಪಕ್ಷದ ರಾಯಬಾಗ ಘಟಕದ ಅಧ್ಯಕ್ಷ ಸಿದ್ದು ಬಂಡಗರ, ಹಾಜಿ ಮುಲ್ಲಾ, ಅರ್ಜುನ ಬಂಡಗರ, ಹರೀಶ ಕುಲಗುಡೆ, ದೀಲೀಪ ಜಮಾದಾರ, ಫಾರೂಕ್ ಮೊಮೀನ, ವಿವೇಕ ಹಟ್ಟಿಕರ, ಅಣ್ಣಾಸಾಹೇಬ ಸಮಾಜೆ, ಮಾರುತಿ ನಾಯಿಕ, ನಿರ್ಮಲಾ ಪಾಟೀಲ, ಶೈಲಜಾ ಕರಿಭೀಮಗೊಳ, ತನುಜಾ ಸಿಂಗೆ ಸೇರಿ ಅನೇಕರು ಇದ್ದರು.