ಬಳ್ಳಾರಿ,ಜೂ.06: ಎಲ್ಲ ಮಕ್ಕಳು ಅತ್ಯಂತ ಆತ್ಮವಿಶ್ವಾಸದಿಂದ ಬಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮತ್ತು ಪರೀಕ್ಷೆ ಚೆನ್ನಾಗಿ ಬರೆದು ಅತ್ಯಂತ ನಗುಮೋಗದಿಂದ ಮರಳುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಿದ್ಧತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ಒರ್ವ ವಿದ್ಯಾಥರ್ಿ ಕೂಡ ಪರೀಕ್ಷೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಮತ್ತು ಹೈಕೋಟರ್್ಗೆ ಸರಕಾರ ಸಲ್ಲಿಸಿರುವ ಎಸ್ಓಪಿಯನ್ನು ಚಾಚೂತಪ್ಪದೇ ಪಾಲಿಸುವ ನಿಟ್ಟಿನಲ್ಲಿ ಅಗತ್ಯಕ್ರಮಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸುರೇಶಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೂ.25ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆಗೆ ಸಂಬಂಧಿಸಿದಂತೆ ಇದುವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಮಕ್ಕಳ ಸುರಕ್ಷತೆಯೇ ಮೊದಲ ಆದ್ಯತೆ. ಹೈಕೋಟರ್್ಗೆ ಸರಕಾರ ಸಲ್ಲಿಸಿರುವ ಎಸ್ಓಪಿ ನಿಯಮಗಳನ್ನು ಅಂದರೇ ಸಾಮಾಜಿಕ ಅಂತರ ಕಾಪಾಡುವಿಕೆ, ಕಡ್ಡಾಯ ಮಾಸ್ಕ್,ಸ್ಯಾನಿಟೈಸರ್ ಸೇರಿದಂತೆ ಇನ್ನೀತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವ ಮಗು ಕೂಡ ಗಾಬರಿಯಾಗದಂತೆ ನೋಡಿಕೊಳ್ಳಬೇಕು ಮತ್ತು ಈ ಕುರಿತು ಪೋಷಕರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯು ವಿಭಿನ್ನ ಸನ್ನಿವೇಶದಲ್ಲಿ ನಡೆಯುತ್ತಿದ್ದು, ಈ ರೀತಿಯ ಪರಿಸ್ಥಿತಿ ಮತ್ತೆಂದೂ ಬರುವುದುರ ಬೇಡ; ಈಗ ಇರುವ ಸ್ಥಿತಿಯಲ್ಲಿ ನಮ್ಮ ಮಕ್ಕಳಿಗೆ ಅಚ್ಚುಕಟ್ಟಾದ ಸಿದ್ಧತೆಗಳನ್ನು ಮಾಡಿ ಖುಷಿಯಿಂದ ಪರೀಕ್ಷೆ ಬರೆಸುವ ಮೂಲಕ ಅವಿಸ್ಮರಣಿಯವಾಗಿಟ್ಟುಕೊಳ್ಳೋಣ ಎಂದರು.
*ಜೂ.10ರಿಂದ 20ರವರೆಗೆ ಚಂದನವಾಹಿನಿಯಲ್ಲಿ ಕ್ರ್ಯಾಶ್ಕೋಸರ್್: ಚಂದನವಾಹಿನಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇದೇ ಜೂ.10ರಿಂದ 20ರವರೆಗೆ ಚಂದನವಾಹಿನಿಯಲ್ಲಿ ಪುನರ್ಮನನ (ಕ್ರ್ಯಾಶ್ಕೋಸರ್್) ಕ್ಲಾಸ್ಗಳನ್ನು ನಡೆಸಲಾಗುವುದು ಎಂದು ಸಚಿವ ಸುರೇಶಕುಮಾರ್ ತಿಳಿಸಿದರು.
ವಿಶೇಷವಾಗಿ ಮಕ್ಕಳಿಗೆ ಪ್ರಶ್ನೆಪತ್ರಿಕೆ ನೀಡಿ, ಯಾವ ರೀತಿ ಪರೀಕ್ಷೆಗಳು ಎದುರಿಸಬೇಕು ಅಂತ ತಿಳಿಸಲಾಗುವುದು. ಈ ಕುರಿತು ವಿದ್ಯಾಥರ್ಿಗಳಿಗೆ ತಿಳಿಸಬೇಕು ಎಂದು ಅವರು ಹೇಳಿದರು.
*ಸಾರಿಗೆ ವ್ಯವಸ್ಥೆ ಅಚ್ಚುಕಟ್ಟಾಗಿರಲಿ: ಜೂ.25ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಒಂದೇ ಒಂದು ವಿದ್ಯಾಥರ್ಿ ಕೂಡ ಪರೀಕ್ಷೆಯಿಂದ ವಂಚಿತರಾಗದಂತೆ ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು ಎಂದು ಸಚಿವ ಸುರೇಶಕುಮಾರ್ ಅವರು ಸೂಚನೆ ನೀಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಪ್ರತಿಮಗು ಕೂಡ ಯಾವ ರೀತಿ ಕಾಲ್ನಡಿಗೆ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬರುವರೋ, ಪೋಷಕರ ವಾಹನಗಳ ಮೂಲಕವೋ ಅಥವಾ ಖಾಸಗಿ ವಾಹನಗಳ ಮೂಲಕವೋ, ಸಾರಿಗೆ ಸಂಸ್ಥೆಯ ಬಸ್ ಮೂಲಕವೋ ಎಂಬುದನ್ನು ವಿದ್ಯಾಥರ್ಿವಾರು ಸಿದ್ದಪಡಿಸಿ ಅದಕ್ಕೆ ತಕ್ಕ ಹಾಗೆ ಯೋಜನೆ ರೂಪಿಸಿ ಎಂದು ಅವರು ಹೇಳಿದರು.
ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಚಚರ್ಿಸಲಾಗಿದ್ದು, ವಿದ್ಯಾಥರ್ಿಗಳಿಗೆ ಕನರ್ಾಟಕ ಸಾರಿಗೆ ಸಂಸ್ಥೆಯ ಮೂಲಕ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಅವರು ಹಾಲ್ಟಿಕೆಟ್ ತೋರಿಸಿದರೇ ಸಾಕು ಎಂದರು.ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮತ್ತು ಡಿಡಿಪಿಐ ರಾಮಪ್ಪ ಅವರು ತಮ್ಮ ಹಂತದಲ್ಲಿ ಇದುವರೆಗೆ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಸಿದ್ಧತೆಗಳನ್ನು ಸಭೆಗೆ ವಿವರಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನಹರಿಸಬೇಕು. ವಿದ್ಯಾಥರ್ಿಗಳು ಸ್ವತಃ ತಾವೇ ಕುಡಿಯುವ ನೀರಿನ ಬಾಟಲ್ ತರಬೇಕು ಎಂದು ಹೇಳಿದ ಸಚಿವ ಸುರೇಶಕುಮಾರ್ ಅವರು ಪರೀಕ್ಷೆಗಳು ನಡೆಯುವ ಎರಡು ದಿನ ಮುಂಚೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಡೆಸ್ಕ್,ಶೌಚಾಲಯ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದರು.
*114 ಪರೀಕ್ಷಾ ಕೇಂದ್ರಗಳಲ್ಲಿ 41618 ವಿದ್ಯಾಥರ್ಿಗಳ "ಪರೀಕ್ಷೆ: ಬಳ್ಳಾರಿ ಜಿಲ್ಲೆಯಲ್ಲಿ 114 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, 41618ವಿದ್ಯಾಥರ್ಿಗಳು ಪರೀಕ್ಷೆ ಬರೆಯಲಿದ್ದಾರೆ. 26 ಉಪಕೇಂದ್ರಗಳು(ಬ್ಲಾಕ್) ಮಾಡಲಾಗಿದೆ ಎಂದು ಡಿಡಿಪಿಐ ರಾಮಪ್ಪ ಅವರು ಸಭೆಗೆ ವಿವರಿಸಿದರು.8600 ಮಾಸ್ಕ್ಗಳು, 150 ಥರ್ಮಲ್ ಸ್ಕ್ಯಾನರ್, ಅಗತ್ಯವಿರುವಷ್ಟು ಸ್ಯಾನಿಟೈಸರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಪರೀಕ್ಷಾ ವ್ಯವಸ್ಥೆಗೆ 500 ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಪರೀಕ್ಷೆಯನ್ನು ಸುಲಲಿತವಾಗಿ ಮಕ್ಕಳ ಸುರಕ್ಷತೆಗೆ ಒತ್ತುಕೊಟ್ಟು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರೊಂದಿಗೆ ಎರಡು ಬಾರಿ ಸಭೆ ನಡೆಸಲಾಗಿದೆ. ವಿದ್ಯಾಥರ್ಿಗಳು ಧೈರ್ಯವಾಗಿ ಪರೀಕ್ಷೆಗಳು ಎದುರಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಗಡಿಯಾಚೆಗಿನ ವಿದ್ಯಾಥರ್ಿಗಳು 9 ಜನರಿದ್ದು, ಅವರಲ್ಲಿ ಇಬ್ಬರು ರಾಜಸ್ಥಾನದವರಾಗಿದ್ದಾರೆ; ಅವರು ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಉಳಿದ 7 ವಿದ್ಯಾಥರ್ಿಗಳು ಆಂಧ್ರಪ್ರದೇಶದವರಾಗಿದ್ದು, ಇವರಿಗೆ ಬಳ್ಳಾರಿ ಡಿಸಿ ಅವರು ಪಾಸ್ ವಿತರಿಸುವುದಾಗಿ ತಿಳಿಸಿದ್ದಾರೆ ಎಂದರು.ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಸುಧೀರ್ಘ ಚಚರ್ೆಗಳು ನಡೆದವು.
ಸಭೆಯಲ್ಲಿ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ಕೆ.ನಿತೀಶ್, ಎಸ್ಪಿ ಸಿ.ಕೆ.ಬಾಬಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ನಳಿನಿ ಅತುಲ್ ಮತ್ತಿತರರು ಇದ್ದರು.