ಹುನಗುಂದ; ಪ್ರತಿ ಮಗುವಿನಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೆ ಇರುತ್ತದೆ. ಅದನ್ನು ಹೊರಹಾಕಲು ಅವಕಾಶ ಹಾಗೂ ಪ್ರೋತ್ಸಾಹದ ಅಗತ್ಯ ಇದೆ ಎಂದು ಬಾಗಲಕೋಟೆಯ ನಿವೃತ್ತ ಪ್ರಾಚಾರ್ಯಎಂ.ಎಂ.ಜಿಗಜಿನಗಿ ಹೇಳಿದರು. ನಗರದ ಎಸ್.ಎಸ್. ಕಡಪಟ್ಟಿ ಇಂಟನ್ಯಾಷನಲ್ ಪಬ್ಲಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂಕಲ್ಪ 2019-20 ನೇ ಕಲೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತ ನಿರಂತರ ಬದಲಾಗುತ್ತಿರುವ ಕಾಲದಲ್ಲಿ ಹೊಸ ವಿಷಯ ಮತ್ತು ಪರಿಕರಗಳ ಅವಶ್ಯಕತೆ ಇದೆ. ಅವುಗಳನ್ನು ಕಂಡು ಹಿಡಿಯಲು ಹಾಗೂ ಸಿದ್ಧಪಡಿಸಲು ವಿಜ್ಞಾನದ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಲ್ಲಿ ಹೊಸ ಆಲೋಚನೆ, ನೂತನ ತಂತ್ರಜ್ಞಾನಗಳ ಅರಿವು, ಮಾಹಿತಿ ಉತ್ತಮ ಸಂದೇಶವನ್ನು ಅಥರ್ೈಸುವುದೇ ಇದರ ಮೂಲ ಉದ್ದೇಶ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ವಿ.ಮ.ವಿ ಸಂಘದ ನಿವೃತ್ತ ಪ್ರೋ.ಎಂ.ಎಂ.ಬಡಗೇರ ಮಾತನಾಡಿ ಎಲ್ಲ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಗತ್ತು ನಾಗಾಲೋಟದಲ್ಲಿ ಓಡುತ್ತಿದೆ. ಅದಕ್ಕೆ ತಕ್ಕಂತೆ ನಾವು ಓಡಬೇಕಾಗಿದೆ. ಮಕ್ಕಳಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ, ಸಾಮಾಜಿಕ ಕಳಕಳಿ ತುಂಬುವುದರಿಂದ ವಿದ್ಯಾಥರ್ಿಗಳು ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆ ಕಾರ್ಯಧ್ಯಕ್ಷ ಬಸವರಾಜ ಕಡಪಟ್ಟಿ, ಚೇರಮನ್ ಎ.ಪಿ.ಬಳಗಾರ, ಪ್ರಾಚಾರ್ಯ ದಾವಲ್ ಜಾಲಿಹಾಳ, ಲತಾ ಕಡಪಟ್ಟಿ ವೇದಿಕೆಯಲ್ಲಿದ್ದರು. ವಿದ್ಯಾಥರ್ಿನಿಯರು ಪ್ರಾರ್ಥನೆ ಹಾಡಿದರು. ಶಿಕ್ಷಕ ರಮಾಕಾಂತ ಸ್ವಾಗತಿಸಿದರು. ಲತಾ ದೇಶಪಾಂಡ ನಿರೂಪಿಸಿದರು. ಶಿಕ್ಷಕ ಪ್ರಕಾಶ ವಂದಿಸಿದರು. ಶಿಕ್ಷಕರಾದ ಇಮ್ತಿಯಾಜ ಪೆಂಡಾರಿ, ವಿಜಯ ಬೋಳಿಶೆಟ್ಟಿ, ವಾಸೀಮ್ ನಡುವಿನಮನಿ, ಜ್ಯೋತಿ ವಾಲಿ, ವಿಜಯಲಕ್ಷ್ಮಿ ಕೊಡಗಾನೂರ, ಅಲ್ಲಾಸಾಬ ಮುಲಿಮನಿ ಇದ್ದರು.