ಸಾರ್ವಜನಿಕರು ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗಪಡಿಸಿಕೊಳ್ಳಿ

ಗದಗ 28: ಜನಪದ ಕಲೆ ಜನರ ಮಧ್ಯದೊಳಗೆ ರಚಿತವಾದ ಕಲೆಯಾಗಿದ್ದು ಜೀವನಾನುಭವವನ್ನು ಸಂಗೀತ, ನೃತ್ಯಗಳ ಮೂಲಕ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡುತ್ತದೆ ಎಂದು ಶಾಲೆಯ ಸಹಶಿಕ್ಷಕ ಎಸ್.ಎಸ್.ಮಠದ ಹೇಳಿದರು. 

    ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಶ್ರೀ ಜಗದ್ಗುರು ಅನ್ನದಾನೇಶ್ವರ ಪ್ರೌಢ ಶಾಲೆಯಲ್ಲಿ  ಮತ್ತು ತಾರಿಕೊಪ್ಪ ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ವಾರ್ತಾ  ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ ಗ್ರಾಮ ಸಂಪರ್ಕ ಯೋಜನೆ ಅಡಿಯಲ್ಲಿ ದಿ.23 ರಂದು ನಡೆದ ಕ್ಷೇತ್ರ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಇಂತಹ ಸಾಂಪ್ರದಾಯಿಕ ಕಲೆಗಳೊಂದಿಗೆ ಪ್ರಸ್ತುತಪಡಿಸಿದಾಗ ಸಾರ್ವಜನಿಕರಿಗೆ ಅರಿವು ಮೂಡುತ್ತದೆ ಹಾಗಾಗಿ ಸಾರ್ವಜನಿಕರು ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ ಎಂದು ಎಸ್.ಎಸ್.ಮಠದ ತಿಳಿಸಿದರು. 

  ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ಮಹಾತ್ಮ ಗಾಂಧೀಜಿಯವರ ಜೀವನದ ಕುರಿತಾಗಿರುವ ಬಾಪು ಪಾಪು ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. ಸಿದ್ದಲಿಂಗೇಶ್ವರ ಜಾನಪದ ಕಲಾ ತಂಡ ಅಡವಿಸೋಮಾಪೂರ ಹಾಗೂ ಗುರು ಶಿಷ್ಯ ಪರಂಪರೆ ಜಾನಪದ ಕಲಾ ತಂಡ ಲಕ್ಕುಂಡಿ ತಂಡದವರು ಗ್ರಾಮದ ಸ್ವಚ್ಛತೆ ಹಾಗೂ ಸರಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು.

     ಕಾರ್ಯಕ್ರಮದಲ್ಲಿ  ಸಹಶಿಕ್ಷಕರಾದ ಎಸ್.ಎಸ್.ಇನಾಮತಿ. ಎಂ.ಕೆ.ರೋಣದ, ಆರ್.ಎಸ್.ಸಜ್ಜನರ, ಟಿ.ಸಿ.ಲಮಾಣಿ, ಆರ್.ವಿ,ಮೇಕಳೆ, ಎಂ.ಸಿ.ಹಿರೇಮಠ, ವಿದ್ಯಾಥರ್ಿಗಳು ಸೇರಿದಂತೆ ಗ್ರಾಮಸ್ಥರು, ವಾರ್ತಾ  ಇಲಾಖೆಯ ಸಿಬ್ಬಂದಿ ಇದ್ದರು