ಲೋಕದರ್ಶನ ವರದಿ
ರಾಮದುರ್ಗ 14: ರೈತರು ಸರಕಾರದ ಯೋಜನೆಗ ಸಬ್ಸಿಡಿ ಪಡೆಯಲು ಆಶೆ ಪಡದೇ ಯೋಜನೆಯನ್ನು ಕೃಷಿಗೆ ಸಂಪೂರ್ಣವಾಗಿ ಅಳವಡಿಕೆ ಮಾಡಿಕೊಂಡು ಅದರ ಲಾಭ ಪಡೆದು ಆಥರ್ಿಕವಾಗಿ ಸಬಲರಾಗಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಗೊಡಚಿ ಗ್ರಾಮದ ರೈತರ ಜಮೀನಿನಲ್ಲಿ ಏರ್ಪಡಿಸಿದ ಈರುಳ್ಳಿ ಶೇಕರಣಾ ಘಟಕ ಹಾಗೂ ಈರುಳ್ಳಿ ಬೇಸಾಯ ಕುರಿತು ಏರ್ಪಡಿಸಿದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಲೆ ಕುಸಿತದ ಸಂದರ್ಭದಲ್ಲಿ ರೈತರು ತಮ್ಮ ಫಸಲು ಶೇಕರಣೆ ಮಾಡಲು ಸ್ಥಾಪಿಸಿದ ಶೇಕರಣಾ ಘಟಕವನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸುತ್ತಾ ಅದನ್ನು ಕಾಪಾಡಿಕೊಂಡು ಹೋದಲ್ಲಿ ಮಾತ್ರ ದೀರ್ಘಕಾಲ ಬಾಳಿಕೆ ಬರಲು ಸಾಧ್ಯವಿದೆ. ಇಲಾಖೆಯ ಅಧಿಕಾರಿಗಳು ರೈತರಿಗೆ ಸರಕಾರದ ಸೌಲಭ್ಯಗಳ ಮಾಹಿತಿ ನೀಡಬೇಕೆಂದು ಕರೆ ನೀಡಿದರು. ರೈತರು ಅದನ್ನು ದೈನಂದಿನ ಕೃಷಿ ಚಟುವಟಿಕೆಯಲ್ಲಿ ಅಳವಡಿಕೆ ಮಾಡಿಕೊಳ್ಳಬೇಕೆಂದರು.
ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿದರ್ೇಶಕ ರವೀಂದ್ರ ಹಕಾಟಿ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳಿವೆ.
ರೈತರು ಇಲಾಖೆಯನ್ನು ಸಂಪಕರ್ಿಸಿ ತಾವು ಬೆಳೆಯುವ ಬೆಳೆಗಳಿಗೆ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಆಥರ್ಿಕ ಪ್ರಗತಿ ಹೊಂದಬೇಕೆಂದು ಸಲಹೆ ನೀಡಿ, ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ತಲುಪಿಸುವಲ್ಲಿ ತಾವು ಸದಾ ಕಾರ್ಯಪ್ರವೃತ್ತರಾಗಿರುತ್ತೇವೆ ಎಂದರು.
ಈರುಳ್ಳಿ ಬೆಳೆಯ ಬೇಸಾಯ ಕ್ರಮ, ಶೇಕರಣೆ ಕುರಿತು ತೋಟಗಾರಿಕಾ ಬೆಳೆ ತಜ್ಞ ಕೆ.ಟಿ. ಪಾಟೀಲ ರೈತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ರೈತ ಮುಖಂಡ ವ್ಹಿ.ಪಿ. ಕುಲಕಣರ್ಿ, ಜಿ.ಪಂ ಸದಸ್ಯರಾದ ಜಹೂರ ಹಾಜಿ, ರೇಣಪ್ಪ ಸೋಮಗೊಂಡ, ಮಾರುತಿ ತುಪ್ಪದ, ಶಿವಕ್ಕ ಬೆಳವಡಿ, ಕೃಷ್ಣಪ್ಪ ಲಮಾಣಿ, ಗ್ರಾ.ಪಂ ಅಧ್ಯಕ್ಷೆ ಕಾಶವ್ವ ಗದ್ದನಕೇರಿಮಠ, ಉಪಾಧ್ಯಕ್ಷ ಈರಣ್ಣ ಕಾಮನ್ನವರ, ತಾ.ಪಂ ಸದಸ್ಯೆ ಗಂಗವ್ವ ಕನಕನ್ನವರ, ಎಪಿಎಂಸಿ ಸದಸ್ಯ ದೇವಪ್ಪ ಬೆಳವಡಿ, ಗ್ರಾ.ಪಂ ಸದಸ್ಯರಾದ ಸಂಗಪ್ಪ ಪಾಕನಟ್ಟಿ, ಈರಣ್ಣ ಹಿರೋಳಿ. ತೋಟಗಾರಿಕಾ ಇಲಾಖೆಯ ತಾಲೂಕಾ ಸಹಾಯಕ ನಿದರ್ೇಶಕ ಪ್ರಕಾಶ ಮುಗಳಕೋಡ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರು ಇದ್ದರು.