ಲೋಕದರ್ಶಣ ವರದಿ
ಕೊಪ್ಪಳ 01: ಹಿಟ್ನಾಳ ಗ್ರಾಮದ ಪದವಿ ಕಾಲೇಜಿನ ರೂ.78 ಲಕ್ಷದ ನೂತನ ಕೊಠಡಿ ನಿಮರ್ಾಣ ಕಾಮಗಾರಿಗೆ ಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು. ಸಕರ್ಾರವು ಯಾವುದೇ ಕಾಮಗಾರಿಗಳಿಗೆ ನೀಡುವ ಅನುಧಾನವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಅನುಧಾನಕ್ಕೆ ಮಹತ್ವ ಬರುತ್ತದೆ. ಸಕರ್ಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಅನುಧಾನ ನೀಡುತ್ತಿದ್ದು. ಪ್ರತಿಯೊಬ್ಬ ವಿಧ್ಯಾಥರ್ಿಯು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಶ್ರಮಪಟ್ಟು ಗುಣಮಟ್ಟದ ಶಿಕ್ಷಣ ಪಡೆಯಬೇಕು ಕೊಪ್ಪಳ ಜಿಲ್ಲೆಯು 371ಜೇಕಲಂಗೆ ಒಳಪಡುವುದರಿಂದ ಇಲ್ಲಿ ಉದ್ಯೋಗಕ್ಕೆ ಅನೇಕ ಅವಕಾಶಗಳು ಇರುತ್ತವೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಸಕರ್ಾರದ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಉತ್ತಮ ಜೀವನ ಸಾಧ್ಯವೆಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಗ್ರಾ.ಪಂ.ಅಧ್ಯಕ್ಷ ದರ್ಮರಾಜ ಕಲಾಲ್, ಜಿ.ಪಂ.ಬೀನಾ ಗೌಸ್, ತಾ.ಪಂ.ಸದಸ್ಯ ಮೂತರ್ಿ ಹಿಟ್ನಾಳ, ಮುಖಂಡರುಗಳಾದ ಭರಮಪ್ಪ ನಗರ, ರಮೇಶ ಕೆ.ಹಿಟ್ನಾಳ, ಅಡಿವೇಪ್ಪ ರಾಠಿ, ಹೊನ್ನಪ್ಪ ಗೌಡರು, ಅಶೋಕ ಇಳಿಗಾರ, ವಿಜಯಕುಮಾರ ಪಾಟೀಲ, ಪಕೀರೇಶ ಮುದ್ದಿ, ಜಡಿಯಪ್ಪ, ನಿಂಗಜ್ಜ ನಾಯಕಾರ, ಹುಸ್ಸೇನಸಾಬ್, ಭುಡನಸಾಬ್, ಶರಣಪ್ಪ ಜೀರ, ವೀರಣ್ಣ ದೊಡ್ಡಮನಿ, ಪಕೀರಪ್ಪ ಬಾರಕೇರ, ರವೀಂದ್ರ ರೆಡ್ಡಿ, ಗುತ್ತಿಗೆದಾರರು, ಪ್ರಾಚಾರ್ಯರು, ಪ್ರಾಧ್ಯಾಪಕರು ಹಾಗೂ ಆರ್ಯನ್ ಕನಸ್ಟ್ರಕ್ಷನ್ ಮೈಸೂರು, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.