ಲೋಕದರ್ಶನವರದಿ
ಗುಳೇದಗುಡ್ಡ: ಜಗತ್ತು ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂದರೆ ಅದಕ್ಕೆ ಕಾರಣ ವಿಜ್ಞಾನ. ಇಂದು ವಿಜ್ಞಾನವಿಲ್ಲದ ಜ್ಞಾನ ಅಪೂರ್ಣವೆಂದೇ ಅರ್ಥ. ಆದ್ದರಿಂದ ಮಕ್ಕಳು ಪ್ರಾಥಮಿಕ ಹಂತದಿಂದಲೇ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಬೇಕು. ಅಂದಾಗ ಮಾತ್ರ ಅವರ ಶಿಕ್ಷಣ ಪರಿಪೂರ್ಣವಾಗುತ್ತದೆ ಎಂದು ಜಿ.ಪಂ. ಮಾಜಿಉಪಾಧ್ಯಕ್ಷ ಹಣಮಂತ ಅಮಾವಿನಮರದ ಹೇಳಿದರು.
ಅವರು ಸಮೀಪದ ಕೋಟೆಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಹಬ್ಬದ ನಿಮಿತ್ತಯ ಹಮ್ಮಿಕೊಂಡ ವಿಜ್ಞಾನ ಮತ್ತು ಸಾಂಸ್ಕೃತಿಕ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಟೆಕಲ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಸೀತಿಮನಿ ವಿಜ್ಞಾನ ಜಾಥಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜ್ಯ ವಿಜ್ಞಾನ ಪರಿಷತ್ ಸಂಪನ್ಮೂಲ ವ್ಯಕ್ತಿ ವಿ.ಬಿ.ಪಾಟೀಲ ಮಾತನಾಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಮಾವಿನಮರದ ಅಧ್ಯಕ್ಷತೆವಹಿಸಿದ್ದರು. ಸಿಆರ್ಪಿ ಸಂಯೋಜಕ ಎಸ್.ಪಿ.ಉದಗಟ್ಟಿ, ಕವಿತಾ ಹುಚ್ಚೇಶ್ವರಮಠ, ಉಮಾ ತಳವಾರ, ಮಂಜುಳಾ ಪಾತ್ರೋಟಿ, ಮಂಜುಳಾ ಕಮತರ, ಸ್ವಪ್ನಾ ಕಾರೂಡಗಿಮಠ, ಪ್ರಾಥಮಿಕ ಶಾಲಾ ಶಿಕ್ಷಕ ಟಿ.ಎನ್.ಕಂಕಣವಾಡಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಸಿ.ಬೆಟಗೇರಿ, ಮಹಿಳಾ ಸಂಪಣ್ಮೂಲ ಶಿಕ್ಷಕಿಯರಾದ ಭಾಗೀರತಿ ಆಲೂರ, ಗೀತಾ ಲೋಣಿ, ಶಿವಲೀಲಾ ಅಳೆಹೊನ್ನಪ್ಪನವರ್, ಮಧು ಕಳ್ಳಿಗುಡ್ಡ, ಶಿಕ್ಷಕ ರವಿ ಬೇನಾಳ ಹಾಗೂ ಸಿದ್ದಪ್ಪ ಮೆಣಸಗಿ ಮತ್ತಿತರರು ಇದ್ದರು.