ಮುಧೋಳ 17: ಗಣಿತ ಎಂಬುದು ಅತ್ಯಂತ ಕಠಿಣ, ಅದನ್ನು ಶಿಕ್ಷಕರು ಮಕ್ಕಳಿಗೆ ಅತ್ಯಂತ ಸರಳ ರೀತಿಯಲ್ಲಿ ಹೇಳುವುದರಿಂದ ಮಕ್ಕಳು ಗಣಿತ ಸುಲಭ ಎಂಬಂತಾಗಬೇಕು ಎಂದು ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿ ಮಂಟೂರ್ ನಿರ್ದೇಶಕರಾದ ಹನುಮಂತ ಮೆಟಗುಡ್ಡ ಹೇಳಿದರು.
ಅವರು ಸರ್ಕಾರಿ ಪ್ರೌಢಶಾಲೆ ಮಂಟೂರನಲ್ಲಿ ಹಮ್ಮಿಕೊಳ್ಳಲಾದ ತಾಲೂಕ ಮಟ್ಟದ ಗಣಿತ ವಿಷಯ ಸಮೂಹವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ, ಪ್ರಸ್ತಾವಿಕ ನುಡಿಗಳನ್ನು ತಾಲೂಕ ಗಣಿತ ಸಮೂಹದ ಅಧ್ಯಕ್ಷರಾದ ಆರ್ ವಿ ಮುತಾಲಿಕ್ ದೇಸಾಯಿ ಬಸವೇಶ್ವರ ಬಾಲಕಿರ ಪ್ರೌಢಶಾಲೆ ಲೋಕಾಪುರ್ ಇವರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಪಾಸಿಂಗ್ ಪ್ಯಾಕೇಜ್ ತಯಾರಿ ಮಾಡಿಸುವುದು ಸೂಕ್ತ ಎಂದು ಹೇಳಿದರು. ತಾಲೂಕ ಗಣಿತ ಸಮೂಹದ ನೋಡಲ್ ಅಧಿಕಾರಿಗಳಾದ ಎಚ್‌ಎ ಮಿರ್ಜಿ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ ಮುದ್ದಾಪುರ್ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಗಣಿತ ಸಮೂಹ ದಲ್ಲಿ ಮಕ್ಕಳು ಗಣಿತ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರಿದರೇ ತಾಲೂಕಿನ ಹಾಗೂ ಜಿಲ್ಲೆಯ ಫಲಿತಾಂಶ ಸುಧಾರಣೆಯಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನ ವಹಿಸಿದ ಡಬ್ಲ್ಯೂ ಆರ್ ಬೀಳಗಿ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ ಮಂಟೂರ್ ಶುಭ ಹಾರೈಸಿದರು. ಸಿಆರ್ ಸೊನ್ನದ್ ಮುಖ್ಯೋಪಾಧ್ಯಾಯರು ಪ್ರಗತಿ ಪ್ರೌಢಶಾಲೆ ಮುಧೋಳ್ ಹಾಗೂ ಹೆಚ್ ವಿ ಕೇರಿ ಗುರುಗಳು ಆರ್ ಬಿಜಿ ಪ್ರೌಢಶಾಲೆ ಲೋಕಾಪುರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ದೇಸಾಯಿ ಗುರುಗಳು ಸರ್ಕಾರಿ ಪ್ರೌಢಶಾಲೆ ಮಂಟೂರ್ ಉತ್ತಮ ಕಾರ್ಯ ನಿರ್ವಹಣೆಯನ್ನು ಮಾಡಿದರು. ಅದೇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರಾದ ಪಲ್ಲವಿ ಧರೆಗೊಂಡ, ಐಶ್ವರ್ಯ ಹಬ್ಬಿದೊಳ್ಳಿ ಪ್ರಾರ್ಥನೆಯನ್ನು ಹಾಡಿದರು. ಸ್ವಾಗತ ಮತ್ತು ಪುಷ್ಾರೆ್ಪಣಯನ್ನು ಬಿ ಜಿ ಪಾಟೀಲ್ ನಡೆಸಿಕೊಟ್ಟರು, ದೇಸಾಯಿ ಗುರುಗಳು ವಂದನಾರೆ್ಣ ಮಾಡಿದರು. ಅನಂತರ ಕಾರ್ಯಕ್ರಮದ ಮೊದಲೇ ಅವಧಿಯನ್ನು ಎಸ್ ಜಿ ತೇಲಿ ಶಿಕ್ಷಕರು ಅಟಲ್ ಬಿಹಾರಿ ವಾಜಪೇಯಿ ಪ್ರೌಢಶಾಲೆ ಹಲಗಲಿ ಇವರು ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳ ಕುರಿತಾಗಿ ಸರಳ ಮತ್ತು ಕ್ಲಿಷ್ಟಕರವಾದ ಅಂತಹ ಸಮಸ್ಯೆಗಳನ್ನು ಅತ್ಯಂತ ಸರಳ ರೀತಿಯಲ್ಲಿ ತಿಳಿಸಿಕೊಟ್ಟರು.ಎರಡನೇ ಅವಧಿಯನ್ನು ಕೆ ಕೆ ಸಾಲ ಮಂಟಪಿ ಗುರುಮಾತೆಯರು ಸರ್ಕಾರಿ ಪ್ರೌಢಶಾಲೆ ಕುಳಲಿ ಇವರು ಸಂಖ್ಯಾಶಾಸ್ತ್ರದ ಪಾಠದ ಮೇಲಿನ ಸಮಸ್ಯೆಗಳನ್ನು ಮಕ್ಕಳಿಗೆ ಯಾವ ರೀತಿ ಬೋಧಿಸಿದರೆ ಸರಳವಾಗಬಹುದೆಂಬುದನ್ನು ತಿಳಿಸಿಕೊಟ್ಟರು. ಮೂರನೇ ಅವಧಿಯನ್ನು ಎಸ್ ಹೆಚ್ ಪುರಾಣಿ ಕ ಗುರುಗಳು ಆರ್ ಎಂ ಎಸ್ ಎ ಅಕ್ಕಿ ಮರಡಿ ಇವರು ತ್ರಿಭುಜಗಳು ಪಾಠದ ಕುರಿತು ಹೇಳಿಕೆ ಮತ್ತು ಪ್ರಮೇಯಗಳನ್ನು ಚಟುವಟಿಕೆ ಆಧಾರಿತವಾಗಿ ಕಲ್ಪನೆಗಳನ್ನು ಮೂಡಿಸಿದರು. ಮೂರು ಸಂಪನ್ಮೂಲ ಶಿಕ್ಷಕರು ಅತ್ಯುತ್ತಮವಾದ ನಿರ್ವಹಣೆ ಮಾಡಿದ್ದಕ್ಕಾಗಿ ಸಮೂಹದ ವತಿಯಿಂದ ಅನಂತ ಧನ್ಯವಾದಗಳು ಹೇಳಿ ಕಾರ್ಯಕ್ರಮವನ್ನು ಮುಗಿಸಲಾಯಿತು