ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ

ಬಾಗಲಕೋಟೆ: ಮಕ್ಕಳಿಗೆ ಉತ್ತಮ ಪರಿಸರ ಕಲ್ಪಿಸುವುದರ ಮೂಲಕ ಶಿಕ್ಷಕರಾದವರು ಮಕ್ಕಳೊಂದಿಗೆ ವಿವಿಧ ಚಟುವಟಿಕೆಗಳನ್ನು ಕೈಗೊಂಡು ಕಲಿಕೆಯಲ್ಲಿ ಆಸಕ್ತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹೇಳಿದರು.

  ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಹಮ್ಮಿಕೊಂಡ ಕಾರ್ಯಚಟುವಟಿಕೆಗಳ ಕಿರುನೋಟ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಧನೆಗೆ ಅಸಾಧ್ಯವಾದುದು ಯವುದು ಇಲ್ಲ. ಪ್ರಾಮಾಣಿಕತೆಯಿಂದ ಶಿಕ್ಷಕರು ಪ್ರಯತ್ನಿಸಿದರೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರಬಹುದು ಎಂದರು.

   ಕಳೆದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆ 27ನೇ ಸ್ಥಾನದಲ್ಲಿದೆ. ಆದರೆ ಈ ಬಾರಿ ಇಂತಹ ಕಡಿಮೆ ಮಟ್ಟದ ಫಲಿತಾಂಶವನ್ನು ನಮ್ಮ ಜಿಲ್ಲೆ ಪಡೆಯಬಾರದು. ಪ್ರತಿ ಶಾಲೆಯ ಶಿಕ್ಷಕರು ಮಕ್ಕಳಿಗೆ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಇದೆ ಮತ್ತು ಹೇಗೆ ಬೋಧನೆ ಮಾಡಿದರೆ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ತೋರುತ್ತಾರೆ ಎಂದು ತಿಳಿದು ಮಕ್ಕಳ ಕಲಿಕಾ ಮಟ್ಟಕ್ಕೆ ಇಳಿದು ಪಾಠ ಬೋಧನೆ ಮಾಡಬೇಕು ಎಂದು ತಿಳಿಸಿದರು. 

 ಶಿಕ್ಷಕರಾದವರು ಬೋಧನೆ ಮಾಡವುದನ್ನು ಕೇವಲ ವೃತ್ತಿಯಾಗಿಸಿಕೊಳ್ಳಬಾರದು. ಪ್ರೀತಿಯಿಂದ ಮತ್ತು ಉತ್ಸಾಹದಿಂದ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಬೇಕು. 

 ಇಂದಿನ ದಿನದಲ್ಲಿ ಕಲಿಕೆ ಇಲ್ಲ ಎಂದರೆ ಭವಿಷ್ಯವಿಲ್ಲ. ಒಬ್ಬ ಶಿಕ್ಷಣ ಪಡೆದ ರಾಜಕಾರಣಿಗೂ ಮತ್ತು ಶಿಕ್ಷಣ ಇಲ್ಲದ ರಾಜಕಾರಣಿಗಳ ನಡವಳಿಕೆಗೂ ವ್ಯತ್ಯಾಸವಿರುತ್ತದೆ. 

      ಇಂದಿನ ಯುವಪೀಳಿಗೆಗೆ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ. ಅದಕ್ಕಾಗಿ ಸರ್ವ ಶಿಕ್ಷಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

        ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿದರ್ೇಶಕ ರಂಗೇಗೌಡ ಮಾತನಾಡಿ ಶಿಕ್ಷಕರಾದವರು ಸರ್ವಜ್ಞ ಇದ್ದಂತೆ, ಸರ್ವವನ್ನು ಅರಿತವನಾಗಿರಬೇಕು. ಮಕ್ಕಳ ಮನಸ್ಥಿತಿಯನ್ನು ಅರಿತು ಪಾಠ ಬೋಧಿಸಬೇಕು. ಪ್ರತಿಯೊಬ್ಬ ಶಿಕ್ಷಕನು ತನ್ನ ಶಾಲೆಯಲ್ಲಿ ಕಲಿಯುತ್ತಿರುವ ಮಗುವನ್ನು ತನ್ನ ಮಗು ಎಂದು ಭಾವಿಸಿ ಪ್ರೀತಿಯಿಂದ ಪಾಠ ಮಾಡಬೇಕೆಂದು ತಿಳಿಸಿದರು. 

      ಅತಿಥಿಗಳಾಗಿ ಆಗಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿದರ್ೇಶಕ ವಿಶ್ವನಾಥ ಮಾತನಾಡಿ ಹಿಂದಿನ ಕಲಿಕಾ ಸ್ಥಿತಿಗತಿಗಳಿಗೂ ಇಂದಿನ ಕಲಿಕಾ ಸ್ಥಿತಿಗಳಿಗೂ ತುಂಬಾ ವ್ಯತ್ಯಾಸಗಳಿದ್ದು, ಮನೆಯಲ್ಲಿನ ವಾತಾವರಣ ಮಗುವಿನ ಕಲಿಕೆಗೆ ಹೊಂದಿಕೆಯಾಗುವಂತಿತ್ತು. 

       ಶಾಲೆಯಲ್ಲಿ ಶಿಕ್ಷಕರಾದವರು ಸಹ ಉತ್ತಮ ವಾತಾವರಣ ನಿಮರ್ಿಸಿ ಮಕ್ಕಳಿಗೆ ವಿವಿಧ ಚಟುಚಟಿಕೆಗಳನ್ನು ನೀಡುವ ಮೂಲಕ ಮಕ್ಕಳಿಗೆ ಬೋಧನೆಯತ್ತ ಆಕಷರ್ಿಸಬೇಕು ಎಂದು ಹೇಳಿದರು.

       ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎಸ್.ಎಸ್.ಬಿರಾದರ ಮಾತನಾಡಿ ಕಳೆದ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶ ನಿಜಕ್ಕೂ ಅಸಮಾಧಾನ ತಂದಿದೆ. 

    ಈ ಅಸಾಮಾಧಾನ ಹೋಗಲಾಡಿಸಬೇಕಾದರೆ ಈ ಭಾರಿ ನಮ್ಮ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 1 ರಿಂದ 10ನೇ ಸ್ಥಾನದ ಒಳಗಡೆ ಬರಬೇಕು. ನಮ್ಮ ಇಲಾಖೆ ವತಿಯಿಂದ ಪಠ್ಯದ ಜೊತೆಗೆ ಪಠ್ಯೆತೇರ ಚಟುವಟಿಕೆಗಳನ್ನು ಹಮ್ಮಿಕೊಂಡು ಈ ಭಾರಿ ಉತ್ತಮ ಫಲಿತಾಂಶ ತರುವಲ್ಲಿ ಪ್ರಯತ್ನಿಸುತ್ತೇವೆ ಅದಕ್ಕೆ ಶಿಕ್ಷಕರು ಸಹಕರಿಬೇಕು ಎಂದರು.

      ಕಾರ್ಯಕ್ರಮದಲ್ಲಿ ಕಳೆದ ವರ್ಷ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾಥರ್ಿಗಳಿಗೆ ಬಹುಮಾನವಾಗಿ ಚೆಕ್ ವಿತರಣೆ ಮಾಡಲಾಯಿತು. ಕಾಯರ್ಾಗಾರದಲ್ಲಿ ಡಿವಾಯ್ಪಿಡಿಯ ಪಿ.ಆರ್.ಓಣಿ ಸೇರಿದಂತೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದವರು ಉಪಸ್ಥಿತರಿದ್ದರು.