ಮಂಗನ ಕಾಯಿಲೆ ಹರಡದಂತೆ ಜಾಗೃತಿ ಮೂಡಿಸಿ
ಲೋಕದರ್ಶನ ವರದಿ
ಯಲ್ಲಾಪುರ : ಈಗಾಗಲೇ ನೆರೆಯ ಜಿಲ್ಲೆ ಹಾಗೂ ಜಿಲ್ಲೆಯ ಕೆಲವೊಂದು ಭಾಗದಲ್ಲಿ ಮಂಗನಕಾಯಿಲೆ ಭೀತಿ ಮೂಡಿಸಿದ್ದು ತಾಲೂಕಿನಲ್ಲಿ ಮಂಗನ ಕಾಯಿಲೆ ಹರಡದಂತೆ, ಈ ಕುರಿತು ಸಾರ್ವಜನಿಕರು ಆತಂಕಕ್ಕೊಳಗಾಗದಂತೆ ಜಾಗೃತಿ ಮೂಡಿಸಬೇಕೆಂದು ತಾಪಂ ಅಧ್ಯಕ್ಷೆ ಭವ್ಯಾಶೆಟ್ಟಿ ಹೇಳಿದರು .
ಅವರು ತಾಪಂ ಸಭಾಭವನದಲ್ಲಿ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಸಾವನ್ನಪ್ಪಿರುವ ಮಂಗಗಳಲ್ಲಿ ಕಾಯಿಲೆಯ ಲಕ್ಷಣಗಳು ಕಂಡುಬಂದಿಲ್ಲವೆಂದು ಆರೋಗ್ಯ ಇಲಾಖೆ ಪ್ರವೀಣ ಇನಾಮದಾರ ಹೇಳಿದರಲ್ಲದೇ ಮಂಗನ ಕಾಯಿಲೆಯ ಲಕ್ಷಣಗಳ ಕುರಿತು ಹಾಗೂ ಕೈಗೊಂಡ ಜಾಗೃತಿ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಅರಣ್ಯ ಇಲಾಖೆಯ ಸುಬ್ರಮಣ್ಯ ಮಾತನಾಡಿ ತಾಲೂಕಿನಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ ಎಂಬ ದೂರು ಕೇಳಿಬಂದ ಹಿನ್ನಲೆಯಲ್ಲಿ ಬೋನುಗಳನ್ನು ತರಿಸಿ ಮಂಗಗಳನ್ನು ಹಿಡಿದು ಬೇರೆಡೆ ಸಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯಿಂದ ಸಾತೊಡ್ಡಿ ಜಲಪಾತ ರಸ್ತೆ ನಿಮರ್ಾಣಕ್ಕೆ 53 ಲಕ್ಷ ರೂ ಮಂಜೂರಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಲೋಕೋಪಯೋಗಿಅಭಿಯಂತರ ಕಾಂತರಾಜು, ಜಿ ಪಂ ಇಂ ವಿಭಾಗದ ಅಧಿಕಾರಿಗಳು ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿರುವ ಬಸ್ಸುಗಳ ವೇಳಾಪಟ್ಟಿಯನ್ನು ವಿದ್ಯಾಥರ್ಿಗಳ ಹಿತದೃಷ್ಟಿಯಿಂದ ಬದಲಾವಣೆಮಾಡುವಂತೆ ಹಲವಾರು ಬಾರಿ ಸಾರಿಗೆ ಅಧಿಕಾರಿಗಳಿಗೆ ಮನವಿ ನೀಡಿದರೂ ಸ್ಪಂದಿಸುತ್ತಿಲ್ಲ.ವಿದ್ಯಾಥರ್ಿಗಳು 2,3ತಾಸು ಬಸ್ ನಿಲ್ದಾಣದಲ್ಲಿ ವ್ಯರ್ಥ ಕಾಲಹರಣ ಮಾಡುವಂತಾಗಿದೆ ಎಂದು ಸದಸ್ಯರಾದ ನಾಗರಾಜ ಕವಡಿಕೇರಿ,ನಟರಾಜ ಗೌಡರ ಹೇಳಿದರು. ಮತ್ತೊಮ್ಮೆ ಸಂಬಂಧ ಪಟ್ಟ ಇಲಾಖೆಗಳಿಗೆ ಮನವಿ ನೀಡಿ ಅದಾಗ್ಯೂ ಸಾರಿಗೆ ಇಲಾಖೆ ಸಣ್ನ ಪುಟ್ಟ ಸಮಸ್ಯೆಗಳನ್ನು ಪರಿಹರಿಸದೇ ನಿರ್ಲಕ್ಷ್ಯವನ್ನು ಖಂಡಿಸಿ ಫೆ 11 ರಂದು ತಾಪಂ ಅಧ್ಯಕ್ಷರ ನೇತ್ರತ್ವದಲ್ಲಿ ಸದಸ್ಯರು, ವಿದ್ಯಾಥಿಗಳು, ಪಾಲಕರು ಸೇರಿ ಬಸ್ ನಿಲ್ದಾಣ ಎದುರು ಪ್ರತಿಭಟನೆ ನಡೆಸುವದಾಗಿ ಸವರ್ಾನುಮತದಿಂದ ತೀಮರ್ಾನಿಸಲಾಯಿತು.
ಬಿಇಒ ಎನ್ ಆರ್ ಹೆಗಡೆ ಮಾಹಿತಿ ನೀಡಿ ಈಗಾಗಲೆ 36 ಶಾಲೆಗಳ ಛಾವಣಿ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಶಾಲಾ ವಾಷರ್ಿಕೋತ್ಸವಗಳಿಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ಸದಸ್ಯೆ ಮಂಗಲಾ ನಾಯ್ಕ ಆಕ್ಷೇಪಣೆಗೆ ಉತ್ತರಿಸಿದ ಬಿಈಒ ಗ್ರಾಮೀಣ ಮಟ್ಟದಲ್ಲಿ ಪ್ರೋಟೋಕಾಲ್ ಪದ್ಧತಿ ಕಡ್ಡಾಯ ಇಲ್ಲ ಆದರೂ ಕೂಡಾ ನಾವು ಜನಪ್ರತಿನಿಧಿಗಳಿಗೆ ಕಡ್ಡಾಯವಾಗಿ ಆಹ್ವಾನ ನೀಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸ್ಥಾಯಿಸಮಿತಿ ಅಧ್ಯಕ್ಷೆ ಜ್ಯೋತಿ ತಿನೇಕರ್ ಹಾಗೂ ಸದಸ್ಯರು ಇದ್ದರು.