ಕೊಪ್ಪಳ 02: ಭಾರತ ದೇಶವು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿದ್ದು, ದೇಶದ ಎಲ್ಲಾ ಮಕ್ಕಳಿಗೂ ಅವರ ಹಕ್ಕುಗಳನ್ನು ಅನುಭವಿಸುವಂತಹ ವಾತಾವರಣವನ್ನು ನಿರ್ಮಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಾಕುಂತಲಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಇಂದು (ಮಾಚರ್್ 02) ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ "ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ, ಆಶಾ ಕಾರ್ಯಕತರ್ೆಯರ ಜವಾಬ್ದಾರಿಗಳು" ಕುರಿತಾದ ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರವು ಸಹ ಮಕ್ಕಳ ಸಂರಕ್ಷಣೆಗಾಗಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ/ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿ, ಮಕ್ಕಳ ಮೇಲಿನ ಲೈಂಗಿಕ ಹಲ್ಲೆಗಳನ್ನು ಎಸಗುವತಂಹ ಅರೋಪಿಗಳನ್ನು ಕಠಿಣತರವಾಗಿ ಶಿಕ್ಷಿಸಲು, ಮಕ್ಕಳ ಸಂರಕ್ಷಣಾ ಕಾಯ್ದೆ-2012ಕ್ಕೆ 2019ರಲ್ಲಿ ತಿದ್ದುಪಡಿಯನ್ನು ಮಾಡಿದ್ದು, ಈ ತಿದ್ದುಪಡಿ ಕಾಯ್ದೆಯನ್ವಯ ಮಕ್ಕಳ ಮೇಲೆ ತೀವೃತರವಾದ ಲೈಂಗಿಕ ಹಲ್ಲೆಯನ್ನು ಎಸಗಿದಂತಹ ಆರೋಪಿಗೆ ಅಥವಾ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಮತ್ತು ದಂಡವನ್ನು ವಿಧಿಸಬಹುದಾಗಿದೆ. ಅಲ್ಲದೇ ಗೌರವಾನ್ವಿತ ಸವರ್ೋಚ್ಛ ನ್ಯಾಯಾಲಯವು "ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವು ಸಹ ಅಪರಾಧವೆಂದು ಆದೇಶಿಸಿದೆ. ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಗರ್ಭವತಿಯಾಗಿದ್ದರಿಂದಾಗಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಆದ್ದರಿಂದ ಸಮುದಾಯದಲ್ಲಿ ಕಾರ್ಯನಿರ್ವವಹಿಸುವ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಸದಸ್ಯರುಗಳಾದ ಆಶಾ ಕಾರ್ಯಕತರ್ೆಯರು ಸಮುದಾಯದಲ್ಲಿ ಈ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದರು.
ಮಕ್ಕಳ ವಿಶೇಷ ಪೊಲೀಸ್ ಘಟಕ ಸಾಮಾಜಿಕ ಕಾರ್ಯಕರ್ತ ಬಸಪ್ಪ ಹಾದಿಮನಿ ಮಾತನಾಡಿ, ಮಕ್ಕಳನ್ನು ಅಕ್ರಮವಾಗಿ ಅಥವಾ ನಿಯಮಬಾಹಿರವಾಗಿ ದತ್ತು ಪಡೆದಲ್ಲಿ ಅದು ಶಿಕ್ಷಾರ್ಹ ಅಪರಾಧವಾದ ಹಾಗೂ ಸೆಕ್ಷನ್ 80 ಅನ್ವಯ ಅಪರಾಧವಾಗಿದ್ದು, 1 ಲಕ್ಷ ದಂಡ ಹಾಗೂ 5 ವರ್ಷಗಳವರೆಗೆ ಜೈಲುವಾಸ ವಿಸ್ತರಿಸಬಹುದಾಗಿದೆ. ಮಕ್ಕಳ ಮಾರಾಟ ಮಾಡುವುದು, ಮಕ್ಕಳನ್ನು ಅಪಹರಿಸುವುದು ಸಹ ಶಿಕ್ಷಾರ್ಹ ಅಪರಾಧವಾಗಿದೆ. ಸೆಕ್ಷನ 81ರನ್ವಯ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 3 ಲಕ್ಷ ರೂಪಾಯಿ ದಂಡವನ್ನು ವಿಧಿಸಬಹುದಾಗಿದೆ. ಆದ್ದರಿಂದ ಕಾಯ್ದೆಯ ಕುರಿತು ನಿಮ್ಮ ಸಾರ್ಮಥ್ಯವನ್ನು ವೃದ್ಧಿಸಿ, ತನ್ಮೂಲಕ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವದಾಗಿದೆ. ಮಕ್ಕಳು ಬೇಡವಾದಲ್ಲಿ ಎಲ್ಲೆಂದರಲ್ಲಿ ಬಿಸಾಡಿ, ಮಗುವಿನ ಜೀವಕ್ಕೆ ಮಾರಕವಾಗಬೇಡಿ, ಮಗು ಬೇಡವಾದಲ್ಲಿ "ಮಕ್ಕಳ ಕಲ್ಯಾಣ ಸಮಿತಿಗೆ ಅಥವಾ ಹತ್ತೀರದ ಪೊಲೀಸ್ ಠಾಣೆಯ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಿದಲ್ಲಿ, ಮುಂದಿನ ಪುನರವಸತಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ನೀಡಲಾಗುವದೆಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳು ದತ್ತು ಬೇಕಾದಲ್ಲಿ ಕೇಂದ್ರ ಸರಕಾರದ ಅಂಖಂ ವೆಬ್ ಸೈಟ್ನಲ್ಲಿ ನೊಂದಾವಣೆಯ ಮೂಲಕ ಪಡೆದುಕೊಳ್ಳಬಹುದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಶಾಂತ ರೆಡ್ಡಿ ಅವರು ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಮುನಮ್ಮ ಕಾರ್ಯಕ್ರಮ ನಿರೂಪಿಸಿದರು. ರವಿಕುಮಾರ ಪವಾರ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಮಾಜಿಕ ಕಾರ್ಯಕತರ್ೆ ಶಿವಲೀಲಾ ವನ್ನೂರುರವರು ಕೊನೆಯಲ್ಲಿ ವಂದಿಸಿದರು. ಕಾರಟಗಿ, ಶ್ರೀರಾಮನಗರ, ಸಿದ್ದಾಪುರ, ಬೆನ್ನೂರು, ಬೂದುಗುಂಪಾ, ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕತರ್ೆಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.