ಬೈಲಹೊಂಗಲ- ತಾಯಿಯ ಎದೆ ಹಾಲಿಗೆ ಪ್ರಪಂಚದಲ್ಲಿ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬ ತಾಯಿಯು ತನ್ನ ಮಗುವಿಗೆ ಎದೆ ಹಾಲನ್ಮ್ನ ಉಣಿಸುವ ಮೂಲಕ ಆರೋಗ್ಯವಚಿತ ಪ್ರಜೆಯನ್ನಾಗಿ ರೂಪಿಸಬೇಕು ಎಂದು ಮಕ್ಕಳ ತಜ್ಞೆ ಡಾ.ಸಿಂಧು ಅಂಗಡಿ ಹೇಳಿದರು.
ಅವರು ಪಟ್ಟಣದ ಗೂಂಡ್ಲೂರ ಚಾಳ ಸಮುದಾಯ ಭವನದಲ್ಲಿ ಬುಧವಾರ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಟರಿ, ಇನ್ಹರ ವ್ಹಿಲ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 26ನೇ ಜಾಗತಿಕ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ. ಎದೆ ಹಾಲಿನ ಮಹತ್ವ ಅದರಿಂದಾಗುವ ಪ್ರಯೋಜನಗಳು ಮತ್ತು ಪೌಷ್ಠೀಕ ಆಹಾರದ ಕುರಿತು ತಾಯಂದರಿಗೆ ತಿಳಿಸಿದರು.
ಇನ್ನರ್ ವ್ಹಿಲ್ ಸಂಸ್ಥೆ ಅಧ್ಯಕ್ಷೆ ಡಾ. ರಾಜಶ್ರೀ ಕುಲಕಣರ್ಿ ಮಾತನಾಡಿ, ತಾಯಂದಿರು ಮಗುವಿಗೆ ಎದೆ ಹಾಲು ನೀಡುವದನ್ಮ್ನ ನಿರ್ಲಕ್ಷಿಸಬಾರದು. ಮಗುವಿಗೆ ಎದೆ ಹಾಲು ಅಮೃತವಿದ್ದಂತೆ ಉತ್ತಮ ಪೌಷ್ಠಿಕ ಆಹಾರವನ್ಮ್ನ ತಾಯಂದಿರು ಸೇವಿಸಬೇಕು ಎಂದರು.
ಸಮಾರಂಭದಲ್ಲಿ ಕ್ವ್ಷತ್ರ ಆರೋಗ್ಯ ಶಿಕ್ಪ್ಷಣಾಧಿಕಾರಿ, ಎಸ್. ಎಸ್ ಮುತ್ನಾಳ, ರೇಣುಕಾ ಸಂಕ್ಲೀಪೂರ ಜಯಶ್ರೀ, ಮಹಾದೇವಿ ಮೂಲಿಮನಿ, ಶುಶ್ರೂಷಕಿಯರು ಹಾಗೂ ತಾಯಂದಿರು ಇದ್ದರು.