ಕೊಪ್ಪಳ: ಸದೃಢ ಆರೋಗ್ಯ ಪಡೆಯುವಲ್ಲಿ ಪ್ರತಿಯೊಬ್ಬರೂ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು ಹಾಗೂ ಶೌಚಾಲಯದ ಬಳಕೆ ಮತ್ತು ನಿರ್ವಹಣೆಯನ್ನು ಮಾಡಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ಬಂಡಿಹರ್ಲಾಪೂರ ಗ್ರಾಮದ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಇಂದು (ನ.19) ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ಆಯೋಜಿಸಲಾಗಿದ್ದ "ವಿಶ್ವ ಶೌಚಾಲಯ ದಿನಾಚರಣೆ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಸ್ವಚ್ಛತೆ, ಸಮುದಾಯದ ಸ್ವಚ್ಛತೆ ಹಾಗೂ ಪರಿಸರದ ಕಾಳಜಿ ಹಾಗೂ ವೈಯಕ್ತಿಕ ಶೌಚಾಲಯಗಳ ಬಳಕೆ, ಘನ ತ್ಯಾಜ್ಯ ವಿಲೇವಾರಿ ಕುರಿತು ಹಾಗೂ ಎರಡು ಗುಂಡಿ ಶೌಚಾಲಯಗಳ ನಿಮರ್ಾಣ ಮತ್ತು ಪ್ರಾಮುಖ್ಯತೆ, ನೀರಿನ ಮಹತ್ವ ಮತ್ತು ಜಲವನ್ನು ಸಂರಕ್ಷಿಸುವ ಅಂಶಗಳ ಕುರಿತು ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕೋಬಪ್ಪ ಟಿ. ರವರು ಶೌಚಾಲಯದಿಂದ ಯಾವುದೇ ರೀತಿಯ ಬೇರೆ ಕಾಯಿಲೆಗಳು ಬುರುವುದಿಲ್ಲ. ಆದ್ದರಿಂದ ಎಲ್ಲರ ಮನೆಯಲ್ಲಿ ಒಂದು ಶೌಚಾಲಯ ಇರಬೇಕು ಎಂದು ಅದರ ಮಹತ್ವ ಹಾಗೂ ಶೌಚಾಲಯ ಬಳಸದಿದ್ದರೆ ಅದರಿಂದಾಗುವ ದುಷ್ಟರಿಣಾಮಗಳ ಬಗ್ಗೆ ಮಾತನಾಡಿದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ರವರು ವಿಶ್ವ ಶೌಚಾಲಯ ದಿನಾಚರಣೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಕೆ. ರಾಜಶೇಖರ ಹಿಟ್ನಾಳ, ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಬಾಲಚಂದ್ರನ ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕಮಲಮ್ಮ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಪಾಟೀಲ್ ಹಾಗೂ ಮುಖಂಡರಾದ ವೆಂಕಟೇಶ, ಎಂ ತಿಪ್ಪಣ್ಣ, ಚೆನ್ನಕೇಶವ, ಪಂಚಾಯತಿಯ ಸದಸ್ಯರು, ಸಿಬ್ಬಂದಿ ವರ್ಗದವರು, ತಾಲ್ಲೂಕು ಪಂಚಾಯತಿಯ ಮನರೇಗಾ ಸಿಬ್ಬಂದಿ ಸೇರಿದಂತೆ ಸ್ವಚ್ಛ ಭಾರತ ಮಿಷನ್ (ಗ್ರಾ) ತಾಲ್ಲೂಕು ಯೂನಿಸೆಫ್ ಸಂಯೋಜಕ ಬಸವರಾಜ ಸೂಡಿ ಉಪಸ್ಥಿತರಿದ್ದರು.