ಲೋಕದರ್ಶನವರದಿ
ರಾಣೇಬೆನ್ನೂರು25: ತಾಲೂಕಿನ ಮಾಕನೂರು ಗ್ರಾಮದಲ್ಲಿ ಮುಂಬರುವ ಮಾ 27ರಿಂದ ಆರಂಭಗೊಳ್ಳಲಿರುವ ಆಂಜನೇಯಸ್ವಾಮಿ ಹಾಗೂ ಮರಡಿ ಕೆಂಚಮ್ಮದೇವಿ ಗ್ರಾಮ ದೇವತಾ ಉತ್ಸವ ಜರುಗಲಿರುವ ಹಿನ್ನಲೆಯಲ್ಲಿ ಭಂಡಾರ ಹಚ್ಚಿದ ದಿನದಿಂದ ದೇವರ ಕೋಣ ಕಾಣೆಯಾಗಿರುವ ಕಾರಣ ಗ್ರಾಮಸ್ಥರು ಕೋಣನ ಶೋಧನೆಗೆ ಮುಂದಾಗಿದ್ದಾರೆ.
ಕಳೆದ 3 ವಾರಗಳಿಂದ ಸುತ್ತ ಮುತ್ತಲ ಊರುಗಳಿಗೆ ತೆರಳಿ ಕೋಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ, ಕೋಣ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಸುತ್ತಲೂ 50ಕಿಮೀ ವ್ಯಾಪ್ತಿಯಲ್ಲಿ ಸುಮಾರು ಹಳ್ಳಿಗಳನ್ನು ಸುತ್ತಿದರೂ ಕೋಣ ಇರುವಿಕೆಯ ಬಗ್ಗೆ ಸುಳಿವು ಸಿಗುತ್ತಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ ಎಂದು ಕೆಲ ಗ್ರಾಮಸ್ಥರು ಅಭಿಪ್ರಾಯಿಸುತ್ತಿದ್ದಾರೆ.
ಕೋಣ ನಾಲ್ಕುವರೆ ವರ್ಷದ್ದಾಗಿದ್ದು, ಕಡು ಕಪ್ಪು ಬಣ್ಣದ ಗಟ್ಟಿಮುಟ್ಟಾದ ಮೈಕಟ್ಟು ಹೊಂದಿದೆ. ಸಾರ್ವಜನಿಅಕರು ಎಲ್ಲಾದರೂ ಕೋಣ ಕಾಣಿಸಿಕೊಂಡಲ್ಲಿ ಮೊ: 9739288974/7996501080 ಈ ವಿಳಾಸಕ್ಕೆ ಸಂಪಕರ್ಿಸಲು ಗ್ರಾಮದೇವತಾ ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.