ಮುಂಬೈ 09: ಉಗ್ರನೋರ್ವ ಸಿಡಿಸಿದ ಗುಂಡು ತನ್ನ ದೇಹ ಹೊಕ್ಕಿದ್ದರೂ ಅದರ ಅರಿವೇ ಇಲ್ಲದೆ ದಾಳಿ ಮಾಡುತ್ತಿದ್ದ ಇಬ್ಹರು ಉಗ್ರರ ಹೆಡೆಮುರಿ ಕಟ್ಟಿದ ಮೇಜರ್ ಕೌಸ್ತುಭ್ ರಾಣೆ ಹುತಾತ್ಮರಾಗಿದ್ದಾರೆ.
ಇದೊಂದು ಘಟನೆ ಸಾಕು ಭಾರತೀಯ ಸೇನೆಯಲ್ಲಿರುವ ಯೋಧರು ಎಂತಹ ಶೌರ್ಯಶಾಲಿಗಳು ಎಂದು ಸಾಬೀತು ಪಡಿಸಲು. ಹೌದು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಭಾರತೀಯ ಸೇನೆ ನಾಲ್ಕು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಈ ಪೈಕಿ ಮೇಜರ್ ಕೌಸ್ತುಭ್ ರಾಣೆ ಕೂಡ ಸೇರಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ರಷಿಯಾಬಾದ್ ಅರಣ್ಯ ಪ್ರದೇಶದ ಗುರೇಜ್ ಸೆಕ್ಟರ್ ನಲ್ಲಿ ಮಂಗಳವಾರ ಉಗ್ರರು ದಾಳಿ ನಡೆಸಿದ್ದರು. ಈ ಪೈಕಿ ನಿನ್ನೆ ಮೂವರು ಉಗ್ರರ ತಂಡವನ್ನು ಮೇಜರ್ ಕೌಸ್ತುಭ್ ರಾಣೆ ತಂಡ ಸುತ್ತುವರೆದಿತ್ತು. ಉಗ್ರರು ಮತ್ತು ಸೈನಿಕರ ನಡುವೆ ತೀವ್ರ ಗುಂಡಿನ ಸಮರವೇ ನಡೆದಿತ್ತು. ಈ ಪೈಕಿ ಮೇಜರ್ ಕೌಸ್ತುಭ್ ರಾಣೆ ಇಬ್ಬರು ಉಗ್ರರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಆದರೆ ದುರಂತವೆಂದರೆ ಅವರು ಇಬ್ಬರು ಉಗ್ರರನ್ನು ಹೊಡೆದುರುಳಿಸುವವ ವೇಳೆಗಾಗಲೇ ಅವರ ದೇಹಕ್ಕೆ ಉಗ್ರನೋರ್ವ ಸಿಡಿಸಿದ್ದ ಗುಂಡು ಹೊಕ್ಕಿತ್ತು. ಆದರೆ ಅದರ ಅರಿವೇ ಇಲ್ಲದೇ ಮೇಜರ್ ಕೌಸ್ತುಭ್ ರಾಣೆ ಉಗ್ರರ ಮೇಲೆ ಮುಗಿಬಿದ್ದು ಇಬ್ಬರು ಉಗ್ರರನ್ನು ಕೊಂದು ಹಾಕಿದ್ದರು.
ಬಳಿಕ ರಕ್ತದ ಮುಡುವಿನಲ್ಲಿ ಬಿದ್ದಿದ್ದ ಕೌಸ್ತುಭ್ ರಾಣೆ ಅವರನ್ನು ಸೇನಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಪಲಿಸದೇ ಅವರು ಹುತಾತ್ಮರಾದರು. ಇದೇ ಎನ್ ಕೌಂಟರ್ ನಲ್ಲಿ ಇತರೇ ಮೂವರು ಸೈನಿಕರೂ ಕೂಡ ಹುತಾತ್ಮರಾಗಿದ್ದಾರೆ.
ಮಹಾರಾಷ್ಟ್ರದ ಮೂಲದ ಮೇಜರ್ ಕೌಸ್ತುಭ್ ರಾಣೆ ಅವರು, ರಕ್ಷಣಾ ಇಲಾಖೆ ಪರೀಕ್ಷೆಗಳನ್ನು ಪೂರ್ಣಗೊಳಿಸಿ, 2011ರಲ್ಲಿ ಚೆನ್ನೆನ ಆಫೀಸಸರ್್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಬಳಿಕ ರಾಷ್ಟ್ರೀಯ 36 ರೈಫಲ್ಸ್ ವಿಭಾಗಕ್ಕೆ ಆಯ್ಕೆಯಾದ ಕೌಸ್ತುಭ್ ರಾಣೆ 6 ವರ್ಷ ಸೇವೆ ಸಲ್ಲಿಸಿ ಮೇಜರ್ ಹುದ್ದೆಗೆ ಆಯ್ಕೆಯಾದರು.
ಇನ್ನು ಬಾರಾಮುಲ್ಲಾ ಎನ್ ಕೌಂಟರ್ ನಲ್ಲಿ ಹುತಾತ್ಮರಾದ ಮೇಜರ್ ಕೌಸ್ತುಬ್ ರಾಣೆ ಅವರ ಅಂತ್ಯಕ್ರಿಯೆ ಮಹಾರಾಷ್ಟದ ಥಾಣೆಯಲ್ಲಿ ನಡೆಯಿತು. ಥಾಣೆಯ ಪ್ರತಿಷ್ಟಿತ ಮೀರಾ ರೋಡ್ ನಲ್ಲಿ ಮೇಜರ್ ಕೌಸ್ತುಬ್ ನಿವಾಸವಿದ್ದು, ಅಲ್ಲಿಂದಲೇ ಅವರಿಗೆ ಹೂವಿನ ಮಳೆಗರೆಯುವ ಮೂಲಕ ಅವರನ್ನು ಭಾವಾನತ್ಮಕವಾಗಿ ಬೀಳ್ಕೊಡಲಾಯಿತು. ಮೇಜರ್ ಕೌಸ್ತುಬ್ ರಾಣೆ ಪಾಥರ್ಿವ ಶರೀರ ಸಾಗುವ ರಸ್ತೆಯುದ್ದಕ್ಕೂ ಜನರು ಹೂವಿನ ಹಾಸು ನಿಮರ್ಾಣ ಮಾಡುವ ಮೂಲಕ ಹುತಾತ್ಮ ಯೋಧನಿಗೆ ಬೀಳ್ಗೊಡುಗೆ ನೀಡಿದರು.