ಹುಕ್ಕೇರಿ ದಸರಾ ಉದ್ಘಾಟನೆಗೆ ಮೇಜರ್ ಹಿರೇಮಠ

ಧಾರವಾಡ, ಸ.28 : ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಪ್ರತೀ ವರ್ಷ ಅಲ್ಲಿಯ ಶ್ರೀಗುರು ಶಾಂತೇಶ್ವರ ಸಂಸ್ಥಾನ ಹಿರೇಮಠದಿಂದ ಹಮ್ಮಿಕೊಳ್ಳುವ 10 ದಿನಗಳ ವೈವಿಧ್ಯಪೂರ್ಣ ದಸರಾ ಮಹೋತ್ಸವದ ಉದ್ಘಾಟನೆಗೆ ನಿಯೋಜನೆಗೊಂಡಿರುವ ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ದಸರಾ ಮಹೋತ್ಸವ ಸಮಿತಿ ಪರವಾಗಿ ಶನಿವಾರ ಅಧಿಕೃತ ಆಹ್ವಾನ ನೀಡಲಾಯಿತು. 

ಹುಬ್ಬಳ್ಳಿಯ ಎಕ್ಸೀಡ್ ಕ್ರಾಪ್ ಸಾಯಿನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿದರ್ೆಶಕ ಚಂದ್ರಶೇಖರ ಬೆಳವಡಿ ಅವರು ದಸರಾ ಮಹೋತ್ಸವ ಸಮಿತಿ ವತಿಯಿಂದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ಶಾಲು ಹೊದಿಸಿ ಅಧಿಕೃತ ಆಹ್ವಾನದ ಸ್ಮರಣಿಕೆ ನೀಡಿ ಗೌರವಿಸಿದರು. ಸ್ಪ್ರಿಹಾ ಬಯೋ ಸಾಯಿನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವಲಯ ವ್ಯವಸ್ಥಾಪಕ ಜಿ.ಸಿ. ಪ್ರಸಾದ ಹಾಗೂ ವಿಜಯ ಪಾಟೀಲ ವಿಜಾಪೂರ ಇದ್ದರು. 

ರವಿವಾರ (ಸ.29 ರಂದು) ಮುಂಜಾನೆ 9.30 ರಿಂದ 10.25ರ ಅವಧಿಯ ವೃಶ್ಚಿಕ ಲಗ್ನದ ಪರ್ವಕಾಲದಲ್ಲಿ ಉತ್ತರ ಕನರ್ಾಟಕ ಭಾಗದಲ್ಲಿ ಪ್ರಸಿದ್ಧವಾಗಿರುವ ಹುಕ್ಕೇರಿ ದಸರಾ ಮಹೋತ್ಸವವನ್ನು ಶ್ರೀಗುರು ಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ವಿದ್ಯುಕ್ತವಾಗಿ ಉದ್ಘಾಟಿಸುವರೆಂದು ಹುಕ್ಕೇರಿ ದಸರಾ ಮಹೋತ್ಸವ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.