ಗದಗ 07: ಜಿಲ್ಲಾ ಮಟ್ಟದ ರಾಷ್ಟ್ರೀಯ ವಿಶ್ವ ಶ್ರವಣ ದಿನ/ರಾಷ್ಟ್ರೀಯ ಶ್ರವಣ ಜಾಗೃತಿ ಅಭಿಯಾನ ಜಾಥಾ ಕಾರ್ಯಕ್ರಮವನ್ನು ದಿ. 7ರಂದು ಹಳೇ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಡಾ. ಸತೀಶ ಸಿ. ಬಸರೀಗಿಡದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಸಿರು ನಿಶಾನೆ ತೋರಿಸುವದರ ಮೂಲಕ ಉದ್ಘಾಟನೆ ಮಾಡಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಐಇಸಿ ವಾಹನ ಹಾಗೂ ನರ್ಸಿಂಗ್ ಕಾಲೇಜ ವಿದ್ಯಾಥರ್ಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಯವರು, ಆಶಾ ಕಾರ್ಯಕತರ್ೆಯರು ಘೋಷಣೆಗಳನ್ನು ಕೂಗುತ್ತಾ ನಗರದ ಹಳೇ ಜಿಲ್ಲಾ ಆಸ್ಪತ್ರೆಯಿಂದ ಗಾಂಧೀ ಸರ್ಕಲ್, ತೋಂಟದಾರ್ಯ ಮಠ, ಬೀದಿಗಳಲ್ಲಿ ಸಂಚರಿಸಿ ಹಳೆ ಜಿಲ್ಲಾ ಆಸ್ಪತ್ರೆ ಆವರಣವನ್ನು ತಲುಪಿತು.
ಡಾ. ಸತೀಶ ಸಿ. ಬಸರೀಗಿಡದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಶ್ರವಣದೋಷದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರು. ಚೋಪಾದ ವಸ್ತುಗಳನ್ನು, ಎಣ್ಣೆ, ನೀರು ಇತ್ಯಾದಿಗಳನ್ನು ಹಾಕಬಾರದು ಹಾಗೂ ರಸ್ತೆ ಬದಿಯಲ್ಲಿ ಗುಗ್ಗೆ ತೆಗೆಯುವವರಿಂದ ಕಿವಿಯನ್ನು ಸ್ವಚ್ಛಗೊಳಿಸಿಕೊಳ್ಳಬಾರದು. ಕಿವಿಗೆ ಹಾನಿಕಾರಕ ಔಷಧಗಳನ್ನು ಉಪಯೋಗಿಸಬಾರದು, ರಕ್ತ ಸಂಬಂಧಿಗಳಲ್ಲಿ ವಿವಾಹವಾಗಬಾರದು, ಕರ್ಣವಾಣಿ ಉಪಕರಣಗಳನ್ನು ಜೋರಾದ ಶಬ್ದದೊಂದಿಗೆ ಬಳಬಾರದು ಹಾಗೂ ಧ್ವನಿ ವರ್ಧಕದ ಶಬ್ಧವನ್ನು ಹತ್ತಿರದಿಂದ ಕೇಳಬಾರದು ಎಂದು ತಿಳಿಸಿದರು.
ಡಾ. ವಾಯ್. ಕೆ. ಭಜಂತ್ರಿ ಜಿಲ್ಲಾ ಕುಂಟುಬ ಕಲ್ಯಾಣ ಅಧಿಕಾರಿಗಳು, ಪ್ರಾಸ್ತಾವಿಕವಾಗಿ ಮಾತನಾಡಿ ಶ್ರವಣ ಶಕ್ತಿಯನ್ನು ಉಳಿಸಿಕೊಳ್ಳುವದು ಬಹಳ ಮುಖ್ಯ ಆದ್ದರಿಂದ ಕೆಲವೊಂದು ಸಲಹೆಗಳನ್ನು ಪಾಲಿಸಬೇಕೆಂದು ತಿಳಿಸಿದರು. ಕಿವಿಸೋಂಕು ಇದ್ದರೆ ತಜ್ಞ ವೈದ್ಯರನ್ನು ಸಂಪಕರ್ಿಸಬೇಕು. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಎಲ್ಲಾ ಲಸಿಕೆಯನ್ನು ಹಾಕಿಸುವದು, ಶ್ರವಣ ಯಂತ್ರವನ್ನು ತಜ್ಞರ ಸಲಹೆ ಇಲ್ಲದೇ ಉಪಯೋಗಿಸಬಾರದು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಬಸರೀಗಿಡದ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು, ಡಾ. ಎಸ್. ಎಸ್. ನೀಲಗುಂದ ತಾಲೂಕಾ ಆರೋಗ್ಯಾಧಿಕಾರಿಗಳು, ಉಮೇಶ ಕರಮುಡಿ ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಪುಷ್ಪಾ ಓ. ಪಾಟೀಲ ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಮಂಜುನಾಥ ತಳವಾರ ಬಿಎಚ್ಇಓ. ಪರಮೇಶ್ವರಪ್ಪ ಹಿಪುಆಸ, ಸಿದ್ಧಪ್ಪ ಲಿಂಗದಾಳ ಹೆಬ್ಬಾಳ ಎಲ್.ಎಚ್.ವಿ. ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬಸವರಾಜ ಲಾಳಗಟ್ಟಿ (ಐಸಿಟಿಸಿ) ಜಿಲ್ಲಾ ಮೇಲ್ವಿಚಾರಕರು, ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.