ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ
Maintaining cleanliness is everyone's responsibility.
ಲೋಕದರ್ಶನ ವರದಿ
ಹೂವಿನ ಹಡಗಲಿ 12 : ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿಪಟ್ಟಣದ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ, ಗೃಹಿಣಿಯರು ಸಹಕರಿಸಿರಿ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಪ್ಪ ಜಿ ಹೇಳಿದರು. ಇಲ್ಲಿನ ಪುರಸಭೆ ವತಿಯಿಂದ ಪಟ್ಟಣದ 13 ಹಾಗೂ 20 ನೇ ವಾರ್ಡಿನ ಮಹಿಳೆಯರಿಗೆ ಗುರುವಾರ ಹೊಳಗುಂದಿ ರಸ್ತೆಯಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿಕಸ, ಒಣಕಸ ಅಪಾಯಕಾರಿ ತಾಜ್ಯ ವಿಂಗಡನೆಯ ಕುರಿತು ಕಿರಿಯ ಆರೋಗ್ಯ ನೀರೀಕ್ಷಕ ಎಂ ಸೋಮಶೆಖರ್ ಉಪಯುಕ್ತ ಮಾಹಿತಿ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಜಿ ಹನುಮಂತಪ್ಪ ಮಾತನಾಡಿ ಏಕ ಬಳಕೆಯ ಪ್ಲಾಸ್ಟಿಕ್ ನಿಂದಾಗುವ ಅಪಾಯದ ಬಗ್ಗೆ ವಿವರಿಸಿದರು. ಎರೆಹುಳು ಗೊಬ್ಬರ ತಯಾರಿಕಾ ಘಟಕ ಹಾಗೂ ಹಸಿ ಕಸದಿಂದ ಗೊಬ್ಬರ ತಯಾರಿಸುವುದು ಮತ್ತು ಮರುಬಳಕೆ ಮಾಡುವ ವಿಧಾನ ವಸ್ತುಗಳು ಕುರಿತು ಮಹಿಳೆಯರಿಗೆ ತಿಳಿಸಿದರು.ಕಸೆ ವಿಲೇವಾರಿ ಘಟಕದ ಉತ್ತಂಗಿ ನಿಂಗಪ್ಪ, ಪುರಸಭೆ ಸಿಬ್ಬಂದಿ ದೀಪಾ ಅಂಗಡಿ, ಸಂಜೀವಿನಿ, ಮಂಜುಳಾ, ರೇಖಾ, ಪದ್ಮಾ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 