ಯಾರೂ ಹೊರಗೆ ಬಾರದೆ ಆರೋಗ್ಯ ಕಾಪಾಡಿಕೊಳ್ಳಿ: ಪಿಎಸ್ಐ ಶಿರಹಟ್ಟಿ ಕರೆ

ಲೋಕದರ್ಶನ ವರದಿ

ಶೇಡಬಾಳ 05:  ದೆಹಲಿಯ ನಿಜಾಮುದ್ದಿನ ಮಸೀದಿಯಲ್ಲಿ ಜರುಗಿದ ಜಮಾತ ಧಾಮರ್ಿಕ ಸಭೆಯಲ್ಲಿ ಯಾರಾದರೂ ಭಾಗವಹಿಸಿದ್ದರೆ ಅಥವಾ ಅವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ಕೂಡಲೇ ಪೋಲೀಸರಿಗೆ ಮಾಹಿತಿ ನೀಡಿ, ಒಂದು ವೇಳೆ ಮಾಹಿತಿ ಗೊತ್ತಿದ್ದರು ಕೂಡಾ ಪೋಲೀಸರಿಗೆ ತಿಳಿಸದೇ ಇರುವುದು ದೊಡ್ಡ ಅಪರಾಧವಾಗಿದೆ. ಅದೊಂದು ದೇಶ ದ್ರೋಹದ ಕೆಲಸವಾಗಿದೆ ಎಂದು ಕಾಗವಾಡ ಪಿ ಎಸ್ ಐ ಹನುಮಂತ ಶಿರಹಟ್ಟಿ ಹೇಳಿದರು. 

ರವಿವಾರ ದಿ 5 ರಂದು ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಮಿತಿ ಶಾಲೆಯ ಸಭಾಂಗಣದಲ್ಲಿ  ಕೋರೋನಾ ವೈರಸ ಜನಜಾಗೃತಿ ವಿಷಯವಾಗಿ ಪಟ್ಟಣದ ಹಿಂದು, ಮುಸ್ಲಿಂ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ದೇಶದಲ್ಲಿ ರಾಜ್ಯದಲ್ಲಿ ಮಹಾಮಾರಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಸಾಗಿದೆ.  ಮುಂದಿನ ದಿನಗಳಲ್ಲಿ  ಮನೆಯಿಂದ ಯಾರೂ ಹೊರಗೆ ಬಾರದೆ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳುವಂತೆ  ಕರೆ ನೀಡಿದರು. 

ಜಗತ್ತಿನಲ್ಲಿ ಕೊರೊನಾ ರೋಗವು ಮಹಾಮಾರಿಯಾಗಿ ಕಾಡುತ್ತಿದೆ. ವಿರಳ ಸಾಂದ್ರತೆ ಹೊಂದಿರುವ ಇಟಲಿ, ಅಮೇರಿಕಾ, ಜರ್ಮನಿ, ಜಪಾನ, ಬ್ರೀಟನ ಮೊದಲಾದ ಮುಂದುವರೆದ ದೇಶಗಳೇ ಕೊರೊನಾ ಹಾವಳಿಗೆ ತತ್ತರಿಸಿ ಹೋಗಿರುವಾಗ ಅಧಿಕ ಸಾಂದ್ರತೆ ಹೊಂದಿರುವ ಭಾರತ ದೇಶವು ಅತ್ಯಂತ ಎಚ್ಚರಿಕೆ ವಹಿಸಿಬೇಕಾಗಿರುವುದು ಪ್ರತಿಯೊಬ್ಬ ಪ್ರಜೆಯ  ಕರ್ತವ್ಯವಾಗಿದೆ ಎಂದು ಅಂಕಿ ಅಂಶಗಳೊಂದಿಗೆ ವಿವರಿಸಿದರು.

ಮುಸ್ಲಿಂ ಸಮಾಜ ಬಾಂದವರು  ಮಸೀದಿಗಳಿಗೆ ಹೋಗಿ ನಮಾಜ ಮಾಡದೇ ಮನೆಯಲ್ಲಿಯೇ ಇದ್ದು ಕೊಂಡು ನಮಾಜ ಮಾಡುವಂತೆ ಸಲಹೆ ನೀಡಿದರು.  ಒಂದು ವೇಳೆ ಯಾರಾದರೂ ಕಾನೂನು ಉಲ್ಲಂಘನೆ ಮಾಡಿದರೆ ಅವರ ಮೇಲೆ ಯೋಗ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.  

ಶೇಡಬಾಳ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವಿವೇಕ ಬನ್ನೆ ಮಾತನಾಡಿ ಪ್ರತಿಯೊಬ್ಬರು ಸರಕಾರ ನೀಡುವ ಆದೇಶಗಳನ್ನು ಪಾಲಿಸುತ್ತಾ ಯಾರು  ಮನೆಯಿಂದ ಹೊರಗೆ ಬಾರದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ಈ ಸಮಯದಲ್ಲಿ ಪ ಪಂ ಸದಸ್ಯರು, ಹಿಂದು, ಮುಸ್ಲಿಂ ಮುಖಂಡರು, ವ್ಯಾಪಾರಸ್ಥರು, ಸಾರ್ವಜನಿಕರು ಗ್ರಾಮಸ್ಥರು ಇದ್ದರು.