ಮುಂಬೈ, ಜ 29, ಬಾಲಿವುಡ್ ಸಿಂಗಂ ಸ್ಟಾರ್ ಅಜಯ್ ದೇವಗನ್ ಅವರ ಮುಂಬರಲಿರುವ ಮೈದಾನ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇತ್ತೀಚೆಗೆ ಅಜಯ್ ಅಭಿನಯದ ತಾನಾಜಿ: ದಿ ಅನ್ ಸಂಗ್ ವಾರಿಯರ್ ಚಿತ್ರ 200ಕೋಟಿ ರೂಗಿಂತ ಅಧಿಕ ಮೊತ್ತ ಗಳಿಸುವ ಮೂಲಕ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿತ್ತು. ಮೈದಾನ್ ಚಿತ್ರ ಮಾಜಿ ಭಾರತೀಯ ಫುಲ್ ಬಾಲ್ ತಂಡದ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನ ಆಧಾರಿತವಾಗಿದೆ.
ಅಜಯ್ ದೇವಗನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಶೇರ್ ಮಾಡಿ" ಮೈದಾನ್ ಕ್ಕಾಗಿ ತಯಾರಾಗಿರಿ ನವೆಂಬರ್ 27,2020" ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಅಮಿತ್ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಸೈಯದ್ ಅಬ್ದುಲ್ ರಹೀಮ್, 1950ರಿಂದ 1963ರವರೆಗೆ ಭಾರತೀಯ ಫುಟ್ಬಾಲ್ ತಂಡದ ತರಬೇತುದಾರರಾಗಿದ್ದರು. ಚಿತ್ರದಲ್ಲಿ ಸೈಯದ್ ಅವರ ಪಾತ್ರಕ್ಕೆ ಅಜಯ್ ದೇವಗನ್ ಬಣ್ಣ ಹಚ್ಚಿದ್ದಾರೆ. ಸೈಯದ್ ಅಬ್ದುಲ್ ಅವರನ್ನು ಮಾಡರ್ನ್ ಇಂಡಿಯನ್ ಫುಟ್ಬಾಲ್ ನ ಆರ್ಕಿಟೆಕ್ಟ್ ಎಂದು ಕೂಡ ಕರೆಯಲಾಗುತ್ತದೆ.