ಲೋಕದರ್ಶನ ವರದಿ
ಕೊಪ್ಪಳ 25: ಇಂಪಾದ ಗಾಯನ ಮೂಲಕ ವಿಶ್ವದ ಜನರ ಮನ ತಣಿಸಿದ ಖ್ಯಾತ ಗಾಯಕರಾದ ದಿ. ಮಹ್ಮದ್ ರಫಿ ಅವರು ಇಂದಿಗೂ ಕೋಟ್ಯಾಂತರ ಜನರ ಮನದಲ್ಲಿ ಅಜಮಾರರಾಗಿದ್ದರೆ. ಅವರು ನಮ್ಮ ಆಸ್ತಿ ಎಂದು ಗವಿಸಿದ್ದೇಶ್ವರ ಕಾಲೇಜಿನ ನಿವೃತ್ತ ಪ್ರಾರ್ಚಾರಾದ ಸಿ.ವಿ.ಕಲ್ಮಠ ಬಣ್ಣಿಸಿದರು.
ಅವರು ನಗರದ ಪ್ರಮುಖ ಜವಾಹರ ರಸ್ತೆ ಗಡಿಯಾರ ಕಂಬದ ಬಳಿ ಫ್ರೆಂಡ್ಸ್ ಮೆಲೋಡಿಸ್ ಆಕರ್ೆಸ್ಟ್ರಾ ಕೊಪ್ಪಳ ವತಿಯಿಂದ ಆಯೋಜಿಸಿದ ಮಹಾನ್ ಗಾಯಕ ದಿ|| ಮೊಹ್ಮದ್ ರಫಿ ಅವರ 95ನೇ ಜನ್ಮ ದಿನಾಚರಣೆ ಅಂಗವಾಗಿ ಮಂಗಳಾವಾರ ರಾತ್ರಿ ವೇಳೆಯಲ್ಲಿ ಜರುಗಿದ ರಸಮಂಜರಿ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಮಾತನಾಡಿದರು.
ಮುಂದುವರೆದು ಮಾತನಾಡಿ, ಗಾಯಕ ದಿ. ಮೊಹ್ಮದ್ ರಫಿ ಅವರು ತಮ್ಮ ಇಂಪಾದ ದ್ವನಿಯಿಂದ ಇಂದಿಗೂ ಪ್ರತಿ ಒಬ್ಬರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ನಮ್ಮ ದೇಶ ಕಂಡ ಮಹಾನ್ ಗಾಯಕ ಇವರಾಗಿದ್ದಾರೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ಸಿದ್ದಪ್ಪ ಹಂಚಿನಾಳ ನೆರೆವೇರಿಸಿ ಮಾತನಾಡಿ, ದೇಶದ ಪ್ರತಿ ಒಬ್ಬ ಪ್ರಜೆ ಪರಸ್ಪರ ರಾಷ್ಟ್ರೀಯ ಭಾವೈಕೆತೆಯನ್ನು ಬೆಳೆಸಿಕೊಂಡು ಜೀವನ ಸಾಗಿಸಬೇಕು. ಗಾಯಕ ದಿ. ಮೊಹ್ಮದ್ ರಪಿ ಅವರು ಸರ್ವರಿಗೂ ಪ್ರಿಯವಾದ ಗಾಯಕರಾಗಿದ್ದರು. ಅವರು ಗಾಯನ ಇಂದಿಗೂ ಅವಿಸ್ಮರಣೀಯವಾಗಿ ಮನದಲ್ಲಿ ಉಳಿದಿದೆ ಎಂದರು.
ನಾಗರತ್ನ ಶಿಕ್ಷಣ ಸೇವಾ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಕುಮಾರ ಬೇಗಾರ ಅವರು ಗಾಯಕ ದಿ. ಮೊಹ್ಮದ್ ರಫಿರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಎಂ. ಸಾದಿಕ್ ಅಲಿ ವಹಿಸಿ ಅಧ್ಯಕ್ಷಿಯ ಭಾಷಣ ಮಾಡಿದರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡರಾದ ವಿರುಪಾಕ್ಷಯ್ಯ ಗದಗಿನಮಠ ಉಪಸ್ಥಿತರಿದ್ದು ಉತ್ತಮ ರೀತಿಯಲ್ಲಿ ಜರುಗಿದ ರಸಮಂಜರಿ ಕಾರ್ಯಕ್ರಮ ಜನ ಮನ ಸೆಳೆದಿದೆ ಎಂದು ಗಾಯಕರಿಗೆ ಬಹುಮಾನ ಘೊಷೀಸಿದರು. ಯುವ ನಾಯಕ ಸಲಿಂ ಅಳವಂಡಿ ಅತಿಥಿ ಭಾಷಣ ಮಾಡಿದರು. ಮಿಲ್ಲತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೈಯದ್ ಇಮಾಮ ಹುಸೇನ್ ಸಿಂದೋಗಿ ಉಪ್ಪಸ್ಥಿತರಿದ್ದು ಗಾಯಕರಾದ ಜಾಕೀರ್ ಹುಸೇನ್, ನ್ಯಾಮತ್ ಜವಳಗೇರಾ, ದಾವೂದ್ ಹುನಗುಂದ, ರೇಖಾ ಕಠಾರೆ ಅವರು ಉತ್ತಮ ಗಾಯನ ದೊಂದಿಗೆ ರಸಮಂಜರಿ ಕಾರ್ಯಕ್ರಮ ಜನಮನ ರಂಜಿಸಿತು ಇವರಿಗೆ ಶ್ರೀಪಾದ ರವರು ಸಾಥ ನೀಡಿದರು. ಇಫರ್ಾನ್ ಖುರೇಶಿ ಕಾರ್ಯಕ್ರಮ ನಿರೂಪಿಸಿ, ಪ್ರಾರಂಭದಲ್ಲಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮ ಮಧ್ಯದಲ್ಲಿ ನಗರ ಪೊಲೀಸ್ ಠಾಣೆಯ ಪಿಐ ಮೌನೇಶ ಮಾಲಿಪಾಟೀಲ್ ಸಹ ಆಗಮಿಸಿದಾಗ ಅವರಿಗೆ ಮತ್ತು ಗಣ್ಯ ಅತಿಥಿಗಳಿಗೆ ಫ್ರೆಂಡ್ಸ್ ಮೆಲೋಡಿಸ್ ಆಕರ್ೆಸ್ಟ್ರಾ ಪರವಾಗಿ ಸನ್ಮಾನಿಲಾಯಿತು.