ಮುಂಬೈ, ಆಗಸ್ಟ್ 21 ಇತ್ತೀಚೆಗಷ್ಟೇ ಬಾಲಿವುಡ್ ಬೆಡಗಿಯರು ಕೇವಲ ಚಿತ್ರಗಳಿಗೆ ಮಾತ್ರ ಸೀಮಿತವಾಗದೇ, ವೆಬ್ ಸರಣಿಗಳತ್ತ ಮುಖ ಮಾಡಿದ್ದು, ಈಗ ನಟಿ ಮಾಹಿ ಗಿಲ್ ಕೂಡ ಅದೇ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ
ಮಾಹಿ ಅವರು, 'ದೇವ್ ಡಿ, 'ಸಾಹೇಬ್ ಬಿಬಿ ಔರ್ ಗ್ಯಾಂಗ್ ಸ್ಟರ್' ಮತ್ತು 'ಪಾನ್ ಸಿಂಗ್ ತೋಮರ್' ದಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಶೀಘ್ರವೇ ಅವರು ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದು, ಮರಾಠಿ ಲೈಂಗಿಕ ಕಾರ್ಯಕರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ
ಲೈಂಗಿಕ ಕಾರ್ಯಕರ್ತಿಯ ಪಾತ್ರ ನಿಭಾಯಿಸುವುದು ಕಷ್ಟವಲ್ಲವೇ ಎಂದು ಮಾಹಿಗೆ ಸುದ್ದಿಗಾರರು ಪ್ರಶ್ನಿಸಿದಾಗ, "ನಟಿಯಾಗಿ ನಾನು ತುಂಬಾ ಹಸಿದಿದ್ದೇನೆ. ಹೀಗಾಗಿ ಅಷ್ಟು ಸುಲಭವಾಗಿ ಪಾತ್ರವನ್ನು ನಿರಾಕರಿಸುವುದಿಲ್ಲ. ಏಕೆಂದರೆ ಈ ಮುಂಚೆ ಒಂದೇ ತರಹದ ಚಿತ್ರಕಥೆ ಹಾಗೂ ಪಾತ್ರಗಳು ದೊರಕುತ್ತಿದ್ದವು ಎಂದು ಉತ್ತರಿಸಿದರು.
ನಾನೊಬ್ಬಳು ನಟಿ ಹಾಗೂ ಸ್ಪರ್ಧಾಳು. ಕ್ರಮೇಣ ನಾನು ಸವಾಲಿನ ಪಾತ್ರಗಳನ್ನು ಮಾಡಲು ಪ್ರಾರಂಭಿಸುತ್ತಿದ್ದೇನೆ. ಈ ವೆಬ್ ಸರಣಿಯಲ್ಲಿ ಇಬ್ಬರು ಮಕ್ಕಳನ್ನು ಹೊಂದಿರುವ ಲೈಂಗಿಕ ಕಾರ್ಯಕರ್ತಿಯ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದು ಅವರು ಮಾಹಿತಿ ನೀಡಿದರು.