'ದಬಾಂಗ್-3' ನಲ್ಲಿ ಮಹೇಶ್ ಮಾಂಜ್ರೇಕರ್ ಪುತ್ರಿ

ಮುಂಬೈ, ಜುಲೈ 19 ಬಾಲಿವುಡ್ ನಿರ್ದೇಶಕ ಹಾಗೂ ಕಲಾವಿದ ಮಹೇಶ್ ಮಾಂಜ್ರೇಕರ್ ಅವರ ಪುತ್ರಿ 'ದಬಾಂಗ್-3' ಚಿತ್ರದ ಮೂಲಕ ಬಿಟೌನ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 


ನಟ ಅರ್ಬಾಜ್ ಖಾನ್, ತಮ್ಮ ಸಹೋದರ ಸಲ್ಮಾನ್ ಖಾನ್ ಹಾಗೂ ನಟಿ ಸೋನಾಕ್ಷಿ ಸಿನ್ಹಾ ಮುಖ್ಯ ಭೂಮಿಕೆಯಲ್ಲಿರುವ 'ದಬಾಂಗ್-3' ಚಿತ್ರ ಹೊರತರುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಅವರ ಕಿರಿಯ ಪುತ್ರಿ ಸೈಯಿ, ಬಾಲಿವುಡ್ ಚಿತ್ರರಂಗ ಪ್ರವೇಶಿಸುತ್ತಿದ್ದು, ಸಲ್ಮಾನ್ ಅವರೊಂದಿಗೆ ರೋಮ್ಯಾನ್ಸ್ ಮಾಡಲಿದ್ದಾರೆ. 

       ಸೈಯಿ, ಸಲ್ಮಾನ್ ಅವರ ಪ್ರೇಯಸಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮುಖ್ಯ ಪಾತ್ರದಲ್ಲಿ ಸೋನಾಕ್ಷಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಯುವಕನಾಗಿದ್ದಾಗ ಸೈಯಿ ಅವರ ಪ್ರೇಯಸಿ ಆಗಿರುತ್ತಾರಂತೆ. 


ತಮ್ಮ ಪುತ್ರಿಯ ಕುರಿತು ಮಾತನಾಡಿದ ಮಹೇಶ್, ನೃತ್ಯ ಸಂಯೋಜಕ ಪ್ರಭು ದೇವ್ ನಿರ್ದೇಶಿಸುತ್ತಿರುವ 'ದಬಾಂಗ್-3' ಚಿತ್ರದಲ್ಲಿ ಮಗಳು ಅಭಿನಯಿಸುತ್ತಿದ್ದಾಳೆ. ಮೊದಲಿನಿಂದಲೂ ಅವಳಿಗೆ ಅಭಿನೇತ್ರಿ ಆಗಬೇಕೆಂಬ ಕನಸಿತ್ತು. ಇದೊಂದು ಉತ್ತಮ ಚಿತ್ರವಾಗಿದ್ದು, ಅವಳು ಅಭಿನಯಿಸುತ್ತಿರುವುದಕ್ಕೆ ಸಂತಸವಾಗಿದೆ ಎಂದರು. 


ಈ ಚಿತ್ರದಲ್ಲಿ ಮಹೇಶ್ ಕೂಡ ನಟಿಸಲಿದ್ದಾರೆ