ಕೊಪ್ಪಳ 29: ಇಲ್ಲಿನ ಜಿಲ್ಲಾ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಿನನಿತ್ಯ ಬರುವ ರೋಗಿಗಳಿಗೆ ಯಾವುದೇ ರೀತಿ ಅನುಕೂಲತೆ ಗಳನ್ನು ಇಲ್ಲಿ ಇರುವುದಿಲ್ಲ ,ಸ್ವಚ್ಛತೆ ಕೂಡ ದೂರದ ಮಾತಾಗಿದೆ, ಕೂಡಲೇ ಸರ್ಕಾರ ಕೊಪ್ಪಳ ನಗರದಲ್ಲಿರುವ ಜಿಲ್ಲಾ ಸಾರ್ವಜನಿಕರ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲತೆ ಒದಗಿಸಿ ಕೊಡುವಂತೆ ಬಿ ಎಸ್ ಪಿ ಪಕ್ಷದ ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿರುವ ಮಹಬೂಬ್ ಖಾನ್ ಜಿಲ್ಲಾ ಆಡಳಿತಕ್ಕೆ ಮತ್ತು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಕೂಡ ನಿರ್ಲಕ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ, ಎಕ್ಸರೇ ತೆಗಿಸಲು ಕೇಂದ್ರದ ಮುಂದೆ ನಿಂತು ನಿಂತು ಸಾಕಾಗಿ ಹೋಗುವಂತ ಪರಿಸ್ಥಿತಿ ಇಲ್ಲಿದೆ ,ವೈದ್ಯರು ಬಹಳಷ್ಟು ಓಷಧಿಗಳನ್ನು ಇಲ್ಲಿ ಇಲ್ಲ ಹೊರಗಡೆ ತೆಗೆದುಕೊಳ್ಳಬೇಕೆಂದು ಚೀಟಿ ಬರೆದು ಕಳಿಸುವಂತಹ ಪರಿಸ್ಥಿತಿ ನೋಡಿದರೆ ಸಾರ್ವಜನಿಕ ರೋಗಿಗಳು ಪರದಾಡುವಂತಾಗಿದೆ, ಇಲ್ಲಿ ಯಾವುದೇ ರೀತಿಯ ಅನುಕೂಲ ಇಲ್ಲ ಅನಾನುಕೂಲವೇ ಜಾಸ್ತಿ, ವೈದ್ಯರ ಕೊರತೆ ಇರುವ ಇದೆ, ವೈದ್ಯರಿಂದ ನಿರ್ಲಕ್ಷ ಬೆಜವಾಬ್ದಾರಿ ಇದೆ ಸ್ವಚ್ಛತೆ ಇಲ್ಲ ,ಒಟ್ಟಾರೆ ಇಲ್ಲಿನ ಜಿಲ್ಲಾ ಆಸ್ಪತ್ರೆ, ಅವ್ಯವಸ್ಥೆಯ ಆಗರವಾಗಿದೆ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ಜನಪ್ರತಿನಿಧಿಗಳು ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಬಿಎಸ್ಪಿ ಪಕ್ಷದ ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿರುವ ಮೆಹಬೂಬ್ ಖಾನ್ ಒತ್ತಾಯಿಸಿದ್ದಾರೆ