ಕಾಗವಾಡ 04: ಶಿರಗುಪ್ಪಿಯ "ಅಮೋಲ ಜನಕಲ್ಯಾಣ ಫೌಂಡೇಶನ" ಮತ್ತು ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ 150ನೇ ಮಹಾತ್ಮಾ ಗಾಂಧಿಜಿಯವರ ಜಯಂತಿ ಮತ್ತು ಲಾಲಬಹಾದ್ದೂರ ಶಾಸ್ತ್ರಿಜಿಯವರ 115ನೇ ಜಯಂತಿ ಆಚರಿಸಿದರು.
ಬುಧವಾರ ರಂದು "ಅಮೋಲ ಜನಕಲ್ಯಾಣ ಫೌಂಡೇಶನ"ದ ವೈದ್ಯರಾದ ಡಾ. ಅಮೋಲ ಸರಡೆ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಪುಷ್ಪಲತಾ ಹಾಗೂ ಅವರ ಸಿಬ್ಬಂದಿಯವರು ಸಮುದಾಯ ಆರೋಗ್ಯ ಕೇಂದ್ರ ಪರಿಸರವನ್ನು ಸ್ವಚ್ಛಗೊಳಿಸಿ, ಮಹಾತ್ಮಾ ಗಾಂಧಿಜಿಯವರು ಸ್ವಚ್ಛತೆಗೆ ನೀಡಿರುವ ಸಂದೇಶದಂತೆ ಸೇವೆ ನೀಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಜಿ ಇಂದಿನಿಂದ ಪ್ಲಾಸ್ಟಿಕ್ ಮುಕ್ತ ಭಾರತ ಮಾಡುವ ಪಣ ತೊಟ್ಟಿದ್ದರಿಂದ ಎಲ್ಲರು ಪ್ಲಾಸ್ಟಿಕ್ ಮುಕ್ತ ಮಾಡುವದಾಗಿ ಪ್ರತಿಜ್ಞೆ ತೆಗೆದುಕೊಂಡರು.
ಸರಕಾರಿ ಆಸ್ಪತ್ರೆಯಲ್ಲಿ ಉಪಚಾರಿಸಿಕೊಳ್ಳುತ್ತಿರುವ ರೋಗಿಗಳಿಗೆ ಹಣ್ಣು ವಿತರಿಸಿ, ಜಯಂತಿಯನ್ನು ಆಚರಿಸಿದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಆಶಾ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.