ಮಹಾತ್ಮಾ ಗಾಂಧೀಜಿ ಸತ್ಯ, ಶಾಂತಿ ಅಹಿಂಸೆ ತತ್ವಗಳನ್ನು ಸಮಾಜಕ್ಕೆ ಪರಿಚಯಿಸಿದ ಧೀಮಂತ ನಾಯಕ: ಎಸ್.ಪಿ.ಬಳಿಗಾರ

ಗದಗ 21: ಸತ್ಯ, ಶಾಂತಿ, ಅಹಿಂಸೆ ಹಾಗೂ ಸರಳ ವ್ಯಕ್ತಿತ್ವಗಳಿಂದಾಗಿ ಇಡೀ ಪ್ರಪಂಚಕ್ಕೆ ಗಾಂಧೀಜಿ ಮಹಾತ್ಮಾ ಗಾಂಧೀಜಿಯಾದಂತಹ ಮಹಾನ ಚೇತನರಾದ ಅವರ ತತ್ವಾದರ್ಶಗಳು ಇಂದಿಗೂ ಆದರ್ಶಪ್ರಾಯ ಎಂದು ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್.ಪಿ.ಬಳಿಗಾರ ನುಡಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಕಾರದಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಮಹಾತ್ಮಾ ಗಾಂಧೀಜಿ 150ನೇ ಜನ್ಮ ವಷರ್ಾಚರಣೆಯ ಅಂಗವಾಗಿ ಹಮ್ಮಿಕೊಂಡ ಪಾಪು-ಬಾಪು ರಂಗಪಯಣದ ಗದಗ ಜಿಲ್ಲೆಯ 17 ದಿನಗಳ ಕಾರ್ಯಕ್ರಮಕ್ಕಿಂದು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಂದು ಚಾಲನೆ ನೀಡಿದರು. ಮಹಾತ್ಮಾ ಗಾಂಧೀಜಿಯವರು ನಮ್ಮೆಲ್ಲರ ಹಾಗೆ ಸಾಮಾನ್ಯರಾಗಿ ಹುಟ್ಟಿ ಸರಳ, ನೇರ-ನುಡಿಗಳಿಂದ ಅತೀ ಎತ್ತರಕ್ಕೆ ಬೆಳೆದು ಸತ್ಯ, ಶಾಂತಿ ಅಹಿಂಸೆಗಳೆಂಬ ಮಹಾ ಅಸ್ತ್ರಗಳೊಡನೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದೀಮಂತ ನಾಯಕರು ಎಂದು ನುಡಿದರು. ಅವರು ಚಿಕ್ಕಂದಿನಲ್ಲಿ ಮಾಡಿದಂತಹ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ರಾಷ್ಟ್ರದ ಮಹಾನ ವ್ಯಕ್ತಿಯಾಗಲು ಅವರು ಜೀವನದಲ್ಲಿ ಅಳವಡಿಸಿಕೊಂಡಂತಹ ತತ್ವಾದರ್ಶಗಳನ್ನು ಇಂದಿನ ಆಧುನಿಕ ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳುವದು ಅತೀ ಅವಶ್ಯಕವಾಗಿದೆ.  

ಗಾಂಧೀಜಿಯವರ ಜೀವನಗಾಥೆ ಎಲ್ಲರಿಗೂ ಸ್ಪೂತರ್ಿದಾಯಕವಾಗಿದ್ದು ಇಂದಿನ ಯುವಪೀಳಿಗೆಯು ಅವರ ಜೀವನಗಾಥೆಯನ್ನು ಒಮ್ಮೆಯಾದರೂ ಅಭ್ಯಸಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಧೃಡ ರಾಷ್ಟ್ರ ನಿಮರ್ಾಣಕ್ಕೆ ಮುಂದಾಗಬೇಕೆಂದು ಎಸ.ಪಿ.ಬಳಿಗಾರ ಕರೇ ನೀಡಿದರು.ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ ಗಾಂಧೀಜಿಯವರ ಜಿವನವೇ ಒಂದು ಸಂದೇಶವಾಗಿದೆ. ಅವರ ಜೀವನದಲ್ಲಿ ನಡೆದಂತಹ ಪ್ರತಿ ಘಟನೆಗಳು ಸಾಕಷ್ಟು ವಿಚಾರಗಳನ್ನು ತಿಳಿಸುತ್ತವೆ. ಸಮಾಜದಲ್ಲಿ ಬದಲಾವಣೆಯಾಗಬೇಕಾದರೆ ಅದು ನಮ್ಮಿಂದಲೇ ಆಗಬೇಕು ಎನ್ನುತ್ತಿದ್ದ 

ಅವರು ಅಹಿಂಸೆಯ ಜೊತೆಗೆ ಸ್ವಚ್ಛತೆಗೂ ಹೆಚ್ಚಿನ ಆಧ್ಯತೆ ನೀಡಿದ್ದರು. ಅವರ ಆಶಯದಂತೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ ಅವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸಲು ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ ಎಂದು ಮಂಜುನಾಥ ಚವ್ಹಾಣ ನುಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಎಸ್.ರಡ್ಡೇರ, ಎಸ್.ಎಸ್.ಕೆಳದಿಮಠ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರುಗಳಾದ ಡಾ.ಜಿತೇಂದ್ರ ಮುಗಳಿ, ಡಾ.ಗಜಾನನ ಚನ್ನಶೆಟ್ಟಿ, ಮಲ್ಲಸಮುದ್ರ ಮೊರಾಜರ್ಿ ವಸತಿ ಶಾಲೆ ಶಿಕ್ಷಕರಾದ ನಿಂಗನಗೌಡ ಹೊಸಮನಿ, ವಾತರ್ಾ ಇಲಾಖೆ ಸಿಬ್ಬಂದಿಗಳು, ಗಾಂಧೀ ರಂಗಪಯಣದ ಸಂಯೋಜಕರಾದ ಸೋಮಶೇಖರ ಚಿಕ್ಕಮಠ, ಮೊರಾಜರ್ಿ ವಸತಿ ಶಾಲೆಯ ವಿಧ್ಯಾಥರ್ಿ-ವಿಧ್ಯಾಥರ್ಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಾಹುಬಲಿ ಜೈನರ್ ಕಾರ್ಯಕ್ರಮ ನಿರೂಪಿಸಿದರು.

ನಾಳೆ ದಿ. 22ರಂದು ಪಾಪು-ಬಾಪು ನಾಟಕ ಪ್ರದರ್ಶನವು ಮುಂಜಾನೆ 10.30ಗಂಟೆಗೆ ಹುಲಕೋಟಿಯ ಕೆ.ಎಚ್.ಪಾಟೀಲ ಬಾಲಕಿಯರ ಪ್ರೌಢಶಾಲೆಯಲ್ಲಿ ಹಾಗೂ ಮಧ್ಯಾಹ್ನ 2.30ಗಂಟೆಗೆ ಚಿಕ್ಕಹಂದಿಗೋಳದ ಎಚ್.ಪಿ.ಎಸ್.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆಗೊಳ್ಳಲಿದೆ.