ಮಹಾತ್ಮಾ ಗಾಂಧೀ ಚಲನ ಚಿತ್ರ ಪ್ರದರ್ಶನ

       ಗದಗ  25: ಗುಜರಾತಿನ ಪೋರಬಂದರಿನಲ್ಲಿ ಕರಮಚಂದನಾಗಿ ಜನಿಸಿ ಸತ್ಯ ಮತ್ತು ಅಹಿಂಸೆ ಆದರ್ಶಗಳನ್ನು ಬಳಸಿಕೊಂಡು ಇಡೀ ಭರತ ಖಂಡದ ರಾಷ್ಟ್ರಪಿತನಾಗಿ ಪರಿವರ್ತನೆಗೊಂಡ ಮಹಾತ್ಮಾ ಗಾಂಧೀಜಿ ಎಂದು ಜನ ಮನದಲ್ಲಿ ಸ್ಥಾಯಿ ಆಗಿ ಉಳಿದಿರುವ ಮಹಾತ್ಮಾ ಗಾಂಧೀ ಚಲನಚಿತ್ರ ಪ್ರದರ್ಶನಗೊಂಡಿತು.

  ಜಿಲ್ಲಾಡಳಿತ, ವಾತರ್ಾ ಇಲಾಖೆ ಹಾಗೂ ಕನರ್ಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಆಯೋಜಿಸಿದ ರಿಚರ್ಡ ಅಟೆನಬರೋ ಅವರ ಗಾಂಧೀ ಚಿತ್ರದ ಪ್ರದರ್ಶನವನ್ನು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ. ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಗದಗ ತಹಶಿಲ್ದಾರ ಶ್ರೀನಿವಾಸಮೂತರ್ಿ ಕುಲಕರ್ಣಿ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ.ಪಲ್ಲೇದ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜು ವಿಧ್ಯಾರ್ಥಿಗಳು,ಶಿಕ್ಷಕರು, ಸಾರ್ವಜನಿಕರು ಚಲನ ಚಿತ್ರ ವೀಕ್ಷಿಸಿದರು.