ಧರ್ಮದ ತಿರುಳನ್ನು ಬಿತ್ತಿದ ಮಹಾನ ಚೇತನ ಚಿದಂಬರ ಮಹಾಸ್ವಾಮೀಜಿ

ಬೆಳಗಾವಿ : 17 ನೇ ಶತಮಾನದಲ್ಲಿ ಧರ್ಮ ಅವನತಿಯತ್ತ ಸಾಗಿದಾಗ ಅವತರಿಸಿ ಲೋಕದ ಉದ್ದಾರಕ್ಕಾಗಿ ಶ್ರಮಿಸಿದ ಚಿದಂಬರ ಮಹಾಸ್ವಾಮೀಗಳ ಸೇವೆ ಅವಿಸ್ಮರಣೀಯ. ಮಾತರ್ಾಂಡ ದಿಕ್ಷೀತ್ ಹಾಗೂ ಅವರ ಧರ್ಮ ಪತ್ನಿ ಲಕ್ಷ್ಮಿದೇವಿಯರ ಕಠೋರ ತಪ್ಪಸ್ಸಿನ ಫಲವೇ ಚಿದಂಬರರ ಜನನ.

ಪೂರ್ಣಬ್ರಹ್ಮ ಸವರ್ೇಶ್ವರಾವತಾರ ಎಂದು ವಣರ್ಿತರಾದ ಶಿವ ಚಿಂದಂಬರ ಮಹಾಸ್ವಾಮೀಜಿಯವರ ಲೀಲೆಗಳು ಮತ್ತು ಪವಾಡಗಳು ಕಲಿಯುಗದ ಜನರ ಅಂಧಕಾರದ ಬದುಕಿಗೆ ಹೊಸ ಚೈತನ್ಯ ತುಂಬಿದ್ದವು. ಸಮಾನತೆ, ಐಕ್ಯತೆ, ಆಧ್ಯಾತ್ಮಿಕತೆಯ ತಿರುಳನ್ನು ಭಕ್ತರ ಮನದಲ್ಲಿ ಬಿತ್ತಿದ ಮಹಾನ ಚೇತನ ಚಿದಂಬರರ ಜಯಂತಿ ಉತ್ಸವ ಕಾರ್ಯಕ್ರಮ ನವೆಂಬರ 28 ರಂದು ನಾಡಿನಾದ್ಯಂತ ನಡೆಯಲಿದೆ.

ಶಿವ ಚಿದಂಬರರ ಆನೇಕ ಲೀಲೆಗಳಿಂದ ಭಕ್ತ ವೃಂದ ಉದ್ದಾರವಾಗಿ ನೆಮ್ಮದಿಯ ಜೀವನ ಸಾಗಿಸಿದರು. ಗೊಣ್ಣಾಗರದಲ್ಲಿ ಲೋಕ ಕಲ್ಯಾಣಕ್ಕಾಗಿ ಯಜ್ಞ ಮಾಡಿ ಬರಗಾಲದ ಛಾಯೆಯ ಭೂಮಿಗೆ ಮಳೆ ಕೊಟ್ಟು ಫಲ ನೀಡುವಂತೆ ಮಾಡಿದ್ದರು. ಮೌಡ್ಯ ಅಥವಾ ಡಂಭಾಚಾರದ ಧಮರ್ಾಚರಣೆ ಮೆಚ್ಚದ ಶಿವ ಚಿದಂಬರರು ಪ್ರತಿಯೊಬ್ಬನೂ ತನ್ನ ಆತ್ಮದ ಉದ್ದಾರಕ್ಕಾಗಿ ಪ್ರಯತ್ನಿಸಬೇಕು ಎಂದು ಉಪದೇಶಿಸಿದ್ದರು. 

ಶಿವ ಚಿದಂಬರರು ಮುರಗೋಡ ( ಕೆಂಗೇರಿ) ಯಲ್ಲಿ ಜನಿಸಿ ಅಲ್ಲಿಯೆ ತಮ್ಮ ಅವತಾರ ಸಮಾಪ್ತಿಗೊಳಿಸಿದರು. ಕೆಂಗೇರಿ ಕ್ಷೇತ್ರದಲ್ಲಿ ಚಿದಂಬರರು ಲಿಂಗ ರೂಪದಲ್ಲಿ ಇಂದಿಗೂ ಭಕ್ತ ರಿಗೆ ದರ್ಶನ ನೀಡುತ್ತಿದ್ದಾರೆ. ಇಂತಹ ಮಹಾನ ಪುರುಷರ ಆದರ್ಶ, ಲೀಲೆಗಳನ್ನು ಜನರಿಗೆ ತಿಳಿಸುವ ಕಾರ್ಯ ಆನೇಕರು ಇಂದಿಗೂ ಮುಂದುವರೆಸಿಕೊಂಡು ಸಾಗಿದ್ದಾರೆ.

ಮುರಗೋಡದಲ್ಲಿ ಈಗಿನ ಪೀಠಾಧಿಪತಿಗಳು ಚಿದಂಬರರ ಆಶಯಗಳನ್ನು ಭಕ್ತ ರಿಗೆ ದಾರೆ ಎರೆಯುತ್ತಾ, ಕ್ಷೇತ್ರದ ಸವರ್ಾಂಗೀಣ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಯನ್ನು ಕೂಡಾ ನಡೆಸಿ ಅಕ್ಷರ ದಾಸೋಹ ಉಣ ಬಡಿಸುತ್ತಾ ಸಾಗಿದ್ದಾರೆ.

ಮಹಾರಾಷ್ಟ್ರದ ಭಬಳಗಾಂವದ ರಾಜಾರಾಮರು ಚಿಂದಬರರ ಭಕ್ತರು . ಇವರ ಭಕ್ತಿ ಚಿದಂಬರರಿಗೆ ಅತಿ ಪ್ರೀತಿ. ಅವರು ಅಲ್ಲಿಯೆ ವಾಸವಾಗಿರುವದರಿಂದ ಇದು ಪುಣ್ಯ ಕ್ಷೇತ್ರವಾಗಿ ಹೊರ ಹೊಮ್ಮಿದೆ. ಗುರು ಚಿದಂಬರ ದಿಕ್ಷೀತ್ ಕಕರ್ಿಹಳ್ಳಿ ಇವರು ಚಿದಂಬರರ ವಂಶಜರು, ಸ್ವಾಮೀಯ ಪ್ರೇರಣೆಯಿಂದ ಭಬಳಗಾಂವ ಕ್ಷೇತ್ರವನ್ನು ಸುಕ್ಷೇತ್ರವನ್ನಾಗಿ ಮಾಡಿದ ಕೀತರ್ಿ ಇವರಿಗೆ ಸಲ್ಲುತ್ತದೆ. 

ಚಿದಂಬರರ ಆರಾಧಕರಾದ ಬೆಳಗಾವಿ ಜಿಲ್ಲೆಯ ದಿವಾಕರ ದೇಶಪಾಂಡೆ (ಕಾಕಾ) ಸದಾ ಸ್ವಾಮೀಯ ಚಿಂತನೆ, ಪಾರಾಯಣ, ಧರ್ಮ ಪ್ರಸಾರ ನೊಂದ ಜನರಿಗೆ ಸಾಂತ್ವನ ನೀಡುತ್ತಿದ್ದಾರೆ. ಧರ್ಮದ ತಿರುಳನ್ನು ಮತ್ತು ಚಿದಂಬರರ ತತ್ವ ಆದರ್ಶಗಳನ್ನು ಪ್ರಸ್ತುತ್ ಸಮಾಜದಲ್ಲಿ ಬಿತ್ತಿ ಸನ್ನಡತೆಯ ಪಾಠಗಳ ಅಡಿಪಾಯ ಹಾಕುತ್ತಾ ಸಾಗಿದ್ದಾರೆ.

ಇವರ ಮಾರ್ಗದರ್ಶನದಲ್ಲಿ ನವೆಂಬರ 28 ರಂದು ಬೆಳಗಾವಿ ನಗರದ ಟಿಳಕವಾಡಿ ಬಡಾವಣೆಯ ಕವಳೆಮಠದಲ್ಲಿ ಚಿದಂಬರ ಜಯಂತಿ ಉತ್ಸವನ್ನು ಅದ್ದೂರಿಯಾಗಿ ಆಚರಿಸಲು ಭಕ್ತರು ನಿರ್ಣಯಿಸಿ, ಪೂರ್ವ ಸಿದ್ದತೆಯಲ್ಲಿ ತೊಡಗಿದ್ದಾರೆ.

 ಸರ್ವ ಧರ್ಮ ಸಮ್ಮೇಳವಾಗಿ ರೂಪಗೊಳ್ಳುವ ಈ ಉತ್ಸವದಲ್ಲಿ ಸ್ವಾಮೀಯ ಜನ್ಮ ದಿನಾಚರಣೆ, ಧಾಮರ್ಿಕ ಚಿಂತನೆಗಳ ಉಪನ್ಯಾಸ, ಆಶೀರ್ವಚನ , ಸಂಗೀತ ಸೇವೆ, ಸತ್ಯ ಚಿದಂಬರ ಪೂಜೆ ಮುಂತಾದ ಧಾಮರ್ಿಕ ವಿಧಿಗಳು ಶ್ರದ್ದಾ, ಭಕ್ತಿಯಿಂದ ನಡೆಯಲಿವೆ. ಬನ್ನಿ ನಾವು ನೀವೆಲ್ಲಾ ಸೇರಿ ಇಂತಹ ಉತ್ಸವದಲ್ಲಿ ಭಾಗಿಯಾಗಿ ಪುಣಿತರಾಗೋಣ

- ಎಸ್.ಬಿ. ಪಂಗಣ್ಣವರ ಶಿಕ್ಷಕರು, ಅಕ್ಕ ತಂಗೇರಹಾಳ, ತಾ: ಗೋಕಾಕ