ಮಹಾರಾಷ್ಟ್ರ ಮೈತ್ರಿ ಸರ್ಕಾರ; ಶಿವಸೇನೆಗೆ ಗೃಹ, ನಗರಾಭಿವೃದ್ದಿ ಖಾತೆ..?

ಮುಂಬೈ, ೧೧ ಮಹಾರಾಷ್ಟ್ರದಲ್ಲಿ  ಶಿವಸೇನಾ ಅಧ್ಯಕ್ಷ  ಉದ್ಧವ್ ಠಾಕ್ರೆ ನೇತೃತ್ವದ 'ಮಹಾ ವಿಕಾಸ್ ಅಘಾಡಿ’ ಸರ್ಕಾರ   ಕಳೆದ ತಿಂಗಳು ೨೮ ರಂದು ಪ್ರಮಾಣವಚನ ಸ್ವೀಕರಿದ್ದರೂ, ತನ್ನ ಸಚಿವ   ಸಂಪುಟದ ಸಚಿವರಿಗೆ  ಖಾತೆಗಳನ್ನು   ಇನ್ನೂ   ಹಂಚಿಕೆ  ಮಾಡಿಲ್ಲ.ಮೂರು ಪಕ್ಷಗಳ ಮೈತ್ರಿ ಕೂಟ  ಅಂತಿಮವಾಗಿ  ಖಾತೆಗಳ  ಹಂಚಿಕೆ  ಕುರಿತು  ಒಮ್ಮತಕ್ಕೆ  ಬಂದಿವೆ ಎಂದು ಹೇಳಲಾಗಿದೆ. 

ಮುಖ್ಯಮಂತ್ರಿ ಉದ್ಧವ್  ಠಾಕ್ರೆ   ಸೇರಿ  ಪ್ರಮಾಣ ವಚನ ಸ್ವೀಕರಿಸಿದ  ಆರು  ಸಚಿವರಿಗೆ   ಖಾತೆಗಳನ್ನೇ ಹಂಚಿಕೆ ಮಾಡಿಲ್ಲ   ಎಂಬ ಪ್ರತಿಪಕ್ಷ  ಬಿಜೆಪಿ   ಟೀಕೆಗೆ  ಪ್ರತಿಕ್ರಿಯಿಸಿರುವ ಶಿವಸೇನಾ,  ತಮ್ಮ ಸರ್ಕಾರ ಐದು ವರ್ಷ  ಪೂರ್ಣಗೊಳಿಸಲಿದೆ   ಎಂದು  ವಿಶ್ವಾಸ  ವ್ಯಕ್ತಪಡಿಸಿದೆ.ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್  ಠಾಕ್ರೆ  ಮಂಗಳವಾರ ಸಂಜೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಭೇಟಿಯಾಗಿ  ಸಚಿವರಿಗೆ  ಖಾತೆ  ಹಂಚಿಕೆ ಕುರಿತ  ಮಾತುಕತೆ  ಅಂತಿಮಗೊಳಿಸಿದರು.

ಶಿವಸೇನಾ  ಮೂಲಗಳ  ಪ್ರಕಾರ,  ಮಹತ್ವದ  ಗೃಹ ಮತ್ತು ನಗರಾಭಿವೃದ್ಧಿ  ಖಾತೆಗಳನ್ನು  ತನ್ನ   ವಶದಲ್ಲಿ  ಇರಿಸಿಕೊಳ್ಳಲು ಶಿವಸೇನಾ ನಿರ್ಧರಿಸಿದೆ.  ಎನ್‌ಸಿಪಿಗೆ  ಹಣಕಾಸು ಮತ್ತು ವಸತಿ  ಖಾತೆಗಳನ್ನು ನೀಡಿದೆ. ಕಾಂಗ್ರೆಸ್ ಗೆ ಕಂದಾಯ  ಹಾಗೂ ಲೋಕೋಪಯೋಗಿ ಖಾತೆ  ವಹಿಸುವ  ನಿರೀಕ್ಷೆಯಿದೆ   ಆದರೆ  ಈ ಕುರಿತು  ಇನ್ನೂ ಯಾವುದೇ ಸ್ಪಷ್ಟವಾಗಿಲ್ಲ ಮೂಲಗಳು ಹೇಳಿವೆ.