ಮುಂಬೈ,
ಏ 19, ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ ತಲ್ಲಣ ಸೃಷ್ಟಿಸಿದ್ದು, ಪಾಲ್ಗಾರ್
ಜಿಲ್ಲೆಯಲ್ಲಿ 8 ದಿನದ ಮಗುವಿಗೆ ಕೊರೋನಾ ಸೋಂಕು ತಗುಲಿದೆ. ರಾಜ್ಯದಲ್ಲಿ ದಿನೇ ದಿನೇ
ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣ ಸರ್ಕಾರಕ್ಕೆ ಸವಾಲಾಗಿ
ಪರಿಣಮಿಸಿದೆ. ಈವರೆಗೆ 200ಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಈ ನಡುವೆ , 8 ದಿನದ ಹಸುಗೂಸಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಜನರನ್ನು ಬಹಳ
ಆತಂಕಕ್ಕೆನೂಕಿದೆ. ಆದರೆ ಮಗುವಿನ ತಾಯಿಗೆ ಕೊರೋನಾ ಸೋಂಕು ಇರಲಿಲ್ಲ ಎಂಬುದನ್ನು
ವೈದ್ಯರು ದೃಢಪಡಿಸಿದ್ದಾರೆ. ಹಸುಗೂಸಿನಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ
ಹಿನ್ನೆಲೆಯಲ್ಲಿ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಈ
ವೇಳೆ, ವಿವಿಎಂಸಿಯ ಜಯಚಂದ್ರ ಮೆಡಿಕಲ್ನಲ್ಲಿ ಕೊರೋನಾ ಪಾಸಿಟಿವ್ ಪರೀಕ್ಷೆ
ನಡೆಸಲಾಗಿದೆ. ಮಗುವಿನ ತಾಯಿಗೆ ಕೊರೋನಾ ನೆಗೆಟಿವ್ ಬಂದಿದ್ದು, ಮಗು ಹುಟ್ಟಿದ ಬಳಿಕ
ಹಸುಗೂಸಿಗೆ ಕೊರೋನಾ ಇರುವುದು ಖಚಿತವಾಗಿದೆ. ಇನ್ನು ನಾಗಪುರದಲ್ಲಿ ನಿನ್ನೆಯಿಂದ 9
ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 72ಕ್ಕೆ
ಎರಿಕೆಯಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.