ಮಹಾರಾಷ್ಟ್ರ: ಸರ್ಕಸ್' ಕಂಪನಿ ಸರ್ಕಾರ - ವಿದೂಷಕರ ಮೇಲ್ವಿಚಾರಣೆ ರಾಜಕೀಯ ಜಟಾಪಟಿ

ಕೊಲ್ಹಾಪುರ, ಜೂನ್ 11, ರಾಜ್ಯದಲ್ಲಿ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು 'ಸರ್ಕಸ್'  ಕಂಪನಿಯಾಗಿದೆ ಎಂಬುದನ್ನು  ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಒಪ್ಪಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್  ವ್ಯಂಗವಾಡಿದ್ದಾರೆ ಮಂಗಳವಾರ ಬಿಜೆಪಿ ಕಾರ್ಯಕರ್ತರನ್ನು ಆನ್‌ಲೈನ್‌ನಲ್ಲಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಪ್ರಸ್ತುತ ರಾಜ್ಯ ಸರ್ಕಾರ 'ಸರ್ಕಸ್' ಕಂಪನಿಯಾಗಿದೆ ಎಂದೂ  ಜರಿದಿದ್ದರು. ಇದಕ್ಕೆ ಸೂಕ್ತ  ಪ್ರತಿಯಾಗಿ ಉತ್ತರ ನೀಡಿದ್ದ ಪವಾರ್  "ಹೌದು ನಮ್ಮಲ್ಲಿ 'ಸರ್ಕಸ್' ಮತ್ತು 'ಪ್ರಾಣಿಗಳು' ಕೂಡ ಇವೆ ಆದರೆ ಅವುಗಳನ್ನು ಮೇಲ್ವಿಚಾರಣೆ ಮಾಡಲು ಯಾವುದೇ 'ವಿದುಷಕರು ' (ಕೋಡಂಗಿ) ಇರುವುದಿಲ್ಲ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಿಲ್ಲ ಎಂದು  ತಿರುಗೇಟು ನೀಡಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಅಧ್ಯಕ್ಷ ಪಾಟೀಲ್, ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ 'ಸರ್ಕಸ್'ಕಂಪನಿಯಾಗಿದೆ ಎಂಬುದನ್ನು  ಪವಾರ್  ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.